ಅಂತರಾಷ್ಟ್ರೀಯ

ಪ್ಯಾಲೇಸ್ತೀನ್‌ ಪ್ರಧಾನಿ ಹತ್ಯೆಗೆ ವಿಫ‌ಲ ಯತ್ನ: ಬಾಂಬ್‌ ಸ್ಫೋಟ

Pinterest LinkedIn Tumblr


ಜಬಾಲಿಯಾ, ಗಾಜಾ ಪಟ್ಟಿ: ಗಾಜಾ ಪಟ್ಟಿಗೆ ನೀಡಿದ ಅಪರೂಪದ ಭೇಟಿಯ ವೇಳೆ ಪ್ಯಾಲೇಸ್ತೀನ್‌ ಪ್ರಧಾನಿ ರಮೀ ಹಮದಲ್ಲ ಅವರ ಬೆಂಗಾವಲು ವಾಹನಗಳ ಸಾಲನ್ನು ಗುರಿ ಇರಿಸಿ ನಡೆಸಲಾದ ದಾಳಿಯಲ್ಲಿ ಭಾರೀ ಬಾಂಬ್‌ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.

ಪ್ರಧಾನಿಯವರ ಫ‌ತಾ ಪಕ್ಷವು ಈ ದಾಳಿಗೆ ಗಾಜಾ ಬಂಡುಕೋರರೇ ಕಾರಣ ಎಂದು ದೂರಿದ್ದು ಪ್ರಧಾನಿಯ ಹತ್ಯೆಗೆ ನಡೆಸಲಾದ ವಿಫ‌ಲ ಯತ್ನವೆಂದು ಹೇಳಿದೆ.

ಇಸ್ರೇಲ್‌ ಜತೆಗಿನ ಎರೆಝ ಕ್ರಾಸಿಂಗ್‌ ಮೂಲಕ ಪ್ಯಾಲೇಸ್ತೀನ್‌ ಪ್ರಧಾನಿಯವರ ಬೆಂಗಾವಲು ವಾಹನ ಸಾಲು ಗಾಜಾ ಪಟ್ಟಿ ಪ್ರವೇಶಿಸುತ್ತಿದ್ದಂತೆಯೇ ಈ ಬಾಂಬ್‌ ನ್ಪೋಟ ನಡೆದಿದೆ. ಆದರೆ ಪ್ರಧಾನಿ ಹಮದಲ್ಲ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

-ಉದಯವಾಣಿ

Comments are closed.