ಕರ್ನಾಟಕ

ಭದ್ರಾ ಅರಣ್ಯದಲ್ಲಿ ನೀಲ್​ಗಾಯ್​, 67 ವರ್ಷಗಳ ನಂತರ ದರ್ಶನ

Pinterest LinkedIn Tumblr


ಚಿಕ್ಕಮಗಳೂರು: ಅರವತ್ತೇಳು ವರ್ಷಗಳ ಬಳಿಕ ಇಲ್ಲಿನ ಭದ್ರಾ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಶನಿವಾರ ಜಿಂಕೆ ಪ್ರಭೇದಕ್ಕೆ ಸೇರಿರುವ ನೀಲ್​ಗಾಯ್ ಎಂಬ ಅಪರೂಪದ ಪ್ರಾಣಿ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ.

ಸಫಾರಿ ವೇಳೆ ಪ್ರವಾಸಿಗರೊಬ್ಬರು ತೆಗೆದ ಚಿತ್ರದಲ್ಲಿ ಬ್ಲ್ಯೂ ಬುಲ್​ ಅಂತಲೂ ಕರೆಸಿಕೊಳ್ಳುವ ನೀಲ್​ಗಾಯ್​ ಸೆರೆ ಸಿಕ್ಕಿದ್ದು ಆರು ದಶಕಗಳ ನಂತರ ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ.

ಹುಲ್ಲುಗಾವಲಿನಲ್ಲಿ ವಾಸಿಸುವ ಈ ಪ್ರಾಣಿ ಕಾಡಿನಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ. ಹಾಗಾಗಿ ಭದ್ರಾ ಹುಲಿ ಯೋಜನೆ ನಿರ್ದೇಶಕ ಕಾಂತರಾಜ್​ ಅವರು ನೀಲ್​ಗಾಯ್​ನನ್ನು ಆದಷ್ಟು ಬೇಗ ಪತ್ತೆ ಮಾಡುವಂತೆ ಅರಣ್ಯ ಸಿಬ್ಬಂದಿಗೆ ಸೂಚಿಸಿದ್ದಾರೆ. 1950ರಲ್ಲಿ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿತ್ತು.

Comments are closed.