ಮುಂಬೈ

2014ರಲ್ಲಿ ಮೋದಿಗೆ ಮತ ನೀಡಿದ್ದೆ, ಈಗ ‘ದಾದಾಗಿರಿ’ ಮೂಲಕ ವಿರೋಧಿಸುತ್ತಿದ್ದೇನೆ: ಹಾರ್ದಿಕ್ ಪಟೇಲ್

Pinterest LinkedIn Tumblr


ಮುಂಬೈ: 2014ರಲ್ಲಿ ನಾನೇ ನರೇಂದ್ರ ಮೋದಿ ಅವರಿಗೆ ಮತ ನೀಡಿದ್ದೆ, ಆದರೆ ಈಗ ದಾದಾಗಿರಿ ಮೂಲಕ ಅವರನ್ನೇ ವಿರೋಧಿಸುತ್ತಿದ್ದೇನೆ ಎಂದು ಪಾಟೀದಾರ್ ಹೋರಾಟಗಾರರ ಮುಖ್ಯಸ್ಥ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಇಂಡಿಯಾ ಟುಡೇ ಕಾನ್ ಕ್ಲೇವ್ 2018 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹಾರ್ದಿಕ್ ಪಟೇಲ್, 2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ನಾನೇ ಅವರನ್ನು ಬೆಂಬಲಿಸಿ ಅವರಿಗೆ ಮತ ನೀಡಿದ್ದೆ. ಆದರೆ ಅದೇ ಮೋದಿ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇನೆ. ಅವರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದೇನೆ. ನಾನು ರಹಸ್ಯವಾಗಿ ಏನೂ ಮಾಡುತ್ತಿಲ್ಲ. ಬಹಿರಂಗವಾಗಿಯೇ ನರೇಂದ್ರ ಮೋದಿ ಅವರನ್ನು ನಾನು ವಿರೋಧಿಸುತ್ತಿದ್ದು, ದಾದಾಗಿರಿ ಮೂಲಕ ಇದನ್ನು ಮಾಡುತ್ತಿದ್ದೇನೆ. ಇದಕ್ಕೆ ಒಂದು ಕಾರಣ ಕೂಡ ಇದೆ ಎಂದು ಹೇಳಿದ್ದಾರೆ.

ಅಂತೆಯೇ 2014ರಲ್ಲಿ ನಾನು ನರೇಂದ್ರ ಮೋದಿ ಅವರಿಗಾಗಿ ಪ್ರಚಾರ ಮಾಡಿದ್ದೆ. ಆಗ ನಾನು ಮೋದಿ ಪ್ರಧಾನಿಯಾದರೆ ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಭಾವಿಸಿದ್ದೆ, ಆದರೆ ನನ್ನ ನಂಬಿಕೆ ಸುಳ್ಳಾಯಿತು. ಗುಜರಾತ್ ನಲ್ಲಿ ಸಾವಿರಾರು ಅಮಾಯಕರ ಸಾವು, ಅಮಾಯಕರ ಮೇಲೆ ದೇಶದ್ರೋಹ ಪ್ರಕರಣಗಳು ದಾಖಲಾಯಿತು. ನರೇಂದ್ರ ಮೋದಿ ಅವರನ್ನು ವಿರೋಧಿಸಿದ್ದಕ್ಕೇ ಇಂದಿಗೂ ಕೂಡ ನಾನು ಕೋರ್ಟ್ ಸುತ್ತ ಅಲೆಯುತ್ತಿದ್ದೇನೆ. ತಿಂಗಳಿಗೆ ಎರಡು ಬಾರಿ ನ್ಯಾಯಾಲಯಕ್ಕೆ ನಾನು ತೆರಳಲೇ ಬೇಕಿದೆ. ಇದೇ ಕಾರಣಕ್ಕೆ ನಾನು ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರವನ್ನು ವಿರೋಧಿಸುತ್ತಿದ್ದೇನೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಬಿಜೆಪಿ ಕೋಮು ರಾಜಕೀಯ ಮಾಡುತ್ತಿದ್ದು. ನಾನು ಯಾವುದೇ ಪ್ರದೇಶಕ್ಕೂ ನಿರಾತಂಕವಾಗಿ ಹೋಗಬಲ್ಲೆ, ನನಾಗವ ಧರ್ಮ ಅಥವಾ ಜಾತಿ ಇಲ್ಲ. ಆದರೆ ದೇಶದ ಯಾವುದೇ ಹಿಂದೂ ಅಥವಾ ಮುಸ್ಲಿಂ ಧರ್ಮೀಯರು ಅಪಾಯದಲ್ಲಿಲ್ಲ. ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಅವರು ತಮ್ಮನ್ನು ತಾವೇ ಹಿಂದೂ ಪರ ವ್ಯಕ್ತಿಯಾಗಿ ಗುರುತಿಸಿಕೊಂಡರು. ಪಾಕಿಸ್ತಾನದಲ್ಲಿ ಮುಷರಫ್ ಕೂಡ ಇಂತಹುದೇ ಇಂತಹ ಮಾರ್ಗವನ್ನೇ ಅನುಸರಿಸಿದ್ದರು ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.

Comments are closed.