ರಾಷ್ಟ್ರೀಯ

2005ರಲ್ಲಿ ಮಾಣಿಕ್‌ ಸರ್ಕಾರ್‌ ನಿವಾಸದಲ್ಲಿ ಮಹಿಳೆಯ ಅಸ್ಥಿಪಂಜರ?

Pinterest LinkedIn Tumblr


ಅಗರ್ತಲಾ: ತ್ರಿಪುರದ ಮಾಜಿ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರ ಅಧಿಕೃತ ನಿವಾಸದ ಸೆಪ್ಟಿಕ್‌ ಟ್ಯಾಂಕ್‌ನಲ್ಲಿ 2005ರಲ್ಲಿ ಮಹಿಳೆಯ ಅಸ್ಥಿ ಪಂಜರವೊಂದರ ಪತ್ತೆಯಾಗಿತ್ತು. ಆ ಹಿನ್ನೆಲೆಯಲ್ಲಿ ಮಾಣಿಕ್‌ ಸರ್ಕಾರ್‌ ಅವರ ಅಧಿಕೃತ ನಿವಾಸದಲ್ಲಿ ಈಗ ವಾಸ್ತವ್ಯವಿರುವ ಬಿಜೆಪಿಯ ನೂತನ ಮುಖ್ಯಮಂತ್ರಿ ಬಿಪ್‌ಲಾಬ್‌ ಕುಮಾರ್‌ ದೇಬ್‌ ಅವರು ಸೆಪ್ಟಿಕ್‌ ಟ್ಯಾಂಕನ್ನು ಮೊತ್ತ ಮೊದಲಾಗಿ ಸ್ವಚ್ಚಗೊಳಿಸಿಕೊಳ್ಳಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುನೀಲ್‌ ದೇವಧರ್‌ ಸಲಹೆ ನೀಡಿದ್ದಾರೆ.

ಮಾಣಿಕ್‌ ಸರ್ಕಾರ್‌ ಮಾತ್ರವಲ್ಲದೆ ಅವರ ಸಂಪುಟ ಸಚಿವರ ಅಧಿಕೃತ ನಿವಾಸದ ಸೆಪ್ಟಿಕ್‌ ಟ್ಯಾಂಕ್‌ಗಳನ್ನು ಕೂಡ ಕ್ಲೀನ್‌ ಮಾಡಿಸಿಕೊಳ್ಳಬೇಕು ಎಂದು ಸುನೀಲ್‌ ದೇವಧರ್‌ ಹೇಳಿದ್ದಾರೆ.

ತ್ರಿಪುರದಲ್ಲಿ ಸಿಪಿಎಂನ 25 ವರ್ಷಗಳ ದುರಾಡಳಿತೆಯ ವೇಳೆ ಹಲವಾರು ರಾಜಕೀಯ ಹತ್ಯೆಗಳು ನಡೆದಿದ್ದು ಅವುಗಳನ್ನೆಲ್ಲ ಅಧಿಕಾರ ಬಲದಲ್ಲಿ ಮುಚ್ಚಿ ಹಾಕಲಾಗಿದೆ.ಆದುದರಿಂದ ತ್ರಿಪುರ ಮಾಜಿ ಸಿಎಂ ಮಾತ್ರವಲ್ಲದೆ ಅವರ ಸಚಿವರ ಅಧಿಕೃತ ನಿವಾಸಗಳ ಸೆಪ್ಟಿಕ್‌ ಟ್ಯಾಂಕ್‌ ಕ್ಲೀನ್‌ ಮಾಡಿಸಿದರೆ ಅಲ್ಲಿಯೂ ಮಾನವ ಅಸ್ಥಿ ಪಂಜರಗಳು ಪತ್ತೆಯಾದಾವು ಎಂದು ದೇವಧರ್‌ ಹೇಳಿದ್ದಾರೆ.

-ಉದಯವಾಣಿ

Comments are closed.