ಕರ್ನಾಟಕ

ಚಿತ್ರದುರ್ಗ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ

Pinterest LinkedIn Tumblr


ಚಿತ್ರದುರ್ಗ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಗುರುವಾರ ಸಂಭವಿಸಿದೆ.

ಘಟನೆಯಲ್ಲಿ ತಾಯಿ ಭಾರತಮ್ಮ (65) ಮಗಳು ಶಾಂತಮ್ಮ (40) ಮೊಮ್ಮಗ ವಿಷ್ಣು (17) ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ, ಮೃತದೇಹದ ಪಕ್ಕದಲ್ಲಿ ಚೀಟಿ ದೊರೆತಿದ್ದು ನಮ್ಮ ಸಾವಿಗೆ ನಾವೇ ಕಾರಣರು ಎಂದು ಬರೆಯಲಾಗಿತ್ತು.

ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

-ಉದಯವಾಣಿ

Comments are closed.