
ನವದೆಹಲಿ: ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಇತ್ಯರ್ಥವಾಗಲಿದ್ದರೆ ಭಾರತ ಮುಂದೆ ಸಿರಿಯಾ ಆಗಿ ಮಾರ್ಪಡಲಿದೆ ಎಂದು ಹೇಳಿಕೆ ನೀಡಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ವಿರುದ್ಧ ಎಐಎಂಐಎಂ(ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷ) ದೂರು ದಾಖಲಿಸಿದೆ.
ಶ್ರೀಶ್ರೀ ವಿರುದ್ಧ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷದ ಮುಖಂಡ, ಲಕ್ನೋ ನಿವಾಸಿ ತೌಹಿದ್ ಸಿದ್ದಿಖಿ ದೂರು ದಾಖಲಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ರಾಮಜನ್ಮಭೂಮಿ ವಿವಾದ ಬಗೆಹರಿಯುವ ವಿಚಾರ ತುಂಬಾ ನಿಧಾನಗತಿಯಲ್ಲಿ ಸಾಗುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಟೆಲಿವಿಷನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶ್ರೀ,ಶ್ರೀ ಈ ವಿವಾದ ಬಗೆಹರಿಯದಿದ್ದರೆ ಭಾರತದಲ್ಲಿಯೂ ಸಿರಿಯಾ ರೀತಿ ಪರಿಸ್ಥಿತಿ ತಲೆದೋರಲಿದೆ ಎಂದು ಹೇಳಿದ್ದರು.
ಒಂದು ವೇಳೆ ನ್ಯಾಯಾಲಯ ರಾಮಮಂದಿರದ ವಿರುದ್ಧವಾಗಿ ಆದೇಶ ಕೊಟ್ಟರೆ ರಕ್ತಪಾತವಾಗಲಿದೆ. ಬಹುಸಂಖ್ಯಾತ ಹಿಂದೂಗಳು ಇದನ್ನು ಒಪ್ಪುತ್ತಾರೆ ಎಂದು ಭಾವಿಸುತ್ತೀರಾ?ಹೀಗಾಗಿ ಮುಸ್ಲಿಮರು ತಮ್ಮ ಹಠವನ್ನು ಬಿಡಬೇಕು ಎಂದು ಎಂದು ಹೇಳಿದ್ದರು. ಶ್ರೀಶ್ರೀ ಅವರ ಹೇಳಿಕೆಗೆ ಎಐಎಂಐಎಂ ಸಂಸ್ಥಾಪಕ ಅಸಾದುದ್ದೀನ್ ಒವೈಸಿ ಹಾಗೂ ಶಿವಸೇನಾ ಕೂಡಾ ಟೀಕಿಸಿತ್ತು.
-ಉದಯವಾಣಿ
Comments are closed.