ಕರ್ನಾಟಕ

ಕಾಂಗ್ರೆಸ್​ ಟಿಕೆಟ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್; ಮೂರೇ ದಿನದಲ್ಲಿ 800 ಅರ್ಜಿ ಖಾಲಿ!

Pinterest LinkedIn Tumblr


ಬೆಂಗಳೂರು: 2018ರ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಕಾಂಗ್ರೆಸ್​ ಟಿಕೆಟ್​ಗೆ ಭರ್ಜರಿ ಡಿಮ್ಯಾಂಡ್​ ಬಂದಿದ್ದು ಮೂರೇ ದಿನದಲ್ಲಿ 800 ಅರ್ಜಿಗಳು ಖಾಲಿಯಾಗಿವೆ.

ಅರ್ಜಿ ಪಡೆಯಲು ಇನ್ನು ಮೂರುದಿನಗಳು ಬಾಕಿಯಿದ್ದು ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಶಾಸಕ ಹ್ಯಾರಿಸ್ ಅವರ ಶಾಂತಿ ನಗರ ಕ್ಷೇತ್ರಕ್ಕೆ ಈಗಾಗಲೇ ಮೂರು ಜನರು ಅರ್ಜಿ ಪಡೆದಿದ್ದಾರೆ. ಆದರೆ, ಶಾಸಕ ಎನ್​.ಎ.ಹ್ಯಾರಿಸ್​ ಇನ್ನೂ ಪಡೆದಿಲ್ಲ.

ಸಿ.ವಿ. ರಾಮನ್ ಕ್ಷೇತ್ರದಲ್ಲಿ ಪಿ.ರಮೇಶ್​ ಅರ್ಜಿ ಪಡೆದಿದ್ದಾರೆ. ಸಚಿವ ಎಚ್​.ಸಿ.ಮಹದೇವಪ್ಪನವರ ಕ್ಷೇತ್ರದಿಂದ 3-4 ಜನರು ಅರ್ಜಿ​ ಪಡೆದಿದ್ದಾರೆ. ಘಟಾನುಘಟಿಗಳೇ ಅರ್ಜಿ ಪಡೆದಿದ್ದರಿಂದ ಸಚಿವರಿಗೆ ತಲೆನೋವು ಎದುರಾಗಿದೆ. ಇಲ್ಲಿಯವರೆಗೂ ಅರ್ಜಿ ಖರೀದಿಸಿದವರಲ್ಲಿ ಶೇ.90 ಜನರು ಹೊಸಬರೇ ಇದ್ದಾರೆ.

ಜೆಡಿಎಸ್​ ಬಂಡಾಯ ಶಾಸಕರಿಗೆ ಶಾಕ್​

ಇನ್ನು ಚಾಮರಾಜಪೇಟೆ ಕ್ಷೇತ್ರದಲ್ಲಿ ಬಂಡಾಯ ಜೆಡಿಎಸ್​ ಬಂಡಾಯ ಶಾಸಕ ಜಮೀರ್​ ಅಹಮದ್​ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ, ಇಲ್ಲಿ ಜಿ.ಎ.ಬಾವಾ ಅರ್ಜಿ ಖರೀದಿ ಮಾಡಿದ್ದಾರೆ. ಹಾಗೇ ಪುಲಕೇಶಿ ನಗರದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಆಕಾಂಕ್ಷಿಯಾಗಿದ್ದು ಪ್ರಸನ್ನಕುಮಾರ್​ ಅರ್ಜಿ ಪಡೆದರು.

ಅರ್ಜಿ ಪಡೆದ ಮುಖಂಡರು

ಸಚಿವರಾದ ಕೆ.ಜೆ.ಜಾರ್ಜ್​, ಈಶ್ವರ ಖಂಡ್ರೆ, ಉಮಾಶ್ರೀ, ಡಿ.ಕೆ.ಶಿವಕುಮಾರ್​, ಕೃಷ್ಣಭೈರೇಗೌಡ, ಶಾಸಕ ಎ.ಬಿ.ಮಾಲಕರೆಡ್ಡಿ, ಎನ್​ಎಸ್​ಯುಐ ಅಧ್ಯಕ್ಷ ಮಂಜು ಅರ್ಜಿ ಪಡೆದಿದ್ದಾರೆ.

Comments are closed.