ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಪಂ ನೌಕರರ ವೇತನವನ್ನು ಸರಕಾರವೇ ಪಾವತಿಸಲು ತೀರ್ಮಾನಿಸಿದ್ದು, ಮಾ.1ರಿಂದಲೇ ವೇತನ ಪಾವತಿ ಆರಂಭ ಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿ ದರು.
ಇದರಿಂದ ವಾರ್ಷಿಕ 736.68 ಕೋಟಿ ಸರಕಾರಕ್ಕೆ ಹೊರೆಯಾಗಲಿದೆ. ರಾಜ್ಯದ 6024 ಗ್ರಾಪಂಗಳ 50,114 ನೌಕರರಿಗೆ ಪ್ರಯೋಜನವಾಗಲಿದೆ ಎಂದು ಹೇಳಿ ದರು. ಪ್ರತಿ ತಿಂಗಳು ನೌಕರರ ವೇತನ ಪಾವತಿಯಾಗದೆ ಆರ್ಥಿಕ ಸಂಕಷ್ಟ ಅನುಭವಿಸು ತ್ತಿರುವುದನ್ನು ಮನಗಂಡ ಸರಕಾರ, ಸ್ವತಃ ತನ್ನ ವತಿಯಿಂದಲೇ ವೇತನ ಪಾವತಿಸಿ ಸಂಕಷ್ಟದಿಂದ ಪಾರು ಮಾಡು ತ್ತಿದೆ. ಗ್ರಾಪಂ ಮಟ್ಟದಲ್ಲಿ ನೌಕರರು ಜನರಿಗೆ ಮೂಲಸೌಕರ್ಯಗಳಾದ ಕುಡಿಯುವ ನೀರು, ನೈರ್ಮಲ್ಯ, ಪಂಚಾಯ್ತಿ ಸಂಪ ನ್ಮೂಲ ಸಂಗ್ರಹಣೆ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.
ಗ್ರಾಪಂಗಳ ಪಿಡಿಒ ಹೊರತುಪಡಿಸಿ ಗುಮಾಸ್ತ, ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್, ವಾಟರ್‍ಮೆನ್, ಮೆಕ್ಯಾನಿಕ್, ಸ್ವಚ್ಛತಾಗಾರರ ಹುದ್ದೆ ನಿರ್ವಹಿಸುವವರಿಗೆ ಈ ಸೌಲಭ್ಯ ಅನ್ವಯವಾಗಲಿದೆ. ಇಂತಹ ನೌಕರರಿಗೆ ನಿಗದಿತ ಅವಧಿಯೊಳಗೆ ಕಾರ್ಮಿಕ ಇಲಾಖೆ ನಿಗದಿ ಪಡಿಸಿರುವ ಕನಿಷ್ಠ ವೇತನ ದೊರಕದೆ ಜೀವನ ನಿರ್ವಹಣೆ ಕಷ್ಟವಾಗಿರುವುದನ್ನು ಅರಿತು ಗ್ರಾಪಂ ನೌಕರರಿಗೆ ಸರ್ಕಾರದಿಂದಲೇ ವೇತನ ನೀಡಲು ತೀರ್ಮಾನಿಸಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆ ಪಂಚತಂತ್ರ ತಂತ್ರಾಂಶದಲ್ಲಿ ಮಾನವ ಸಂಪನ್ಮೂಲ, ಗಣಕೀಕೃತ, ನಿರ್ವಹಣಾ ವ್ಯವಸ್ಥೆ ಜಾರಿಗೆ ತರುವ ಮೂಲಕ ವೇತನ ಪಾವತಿ ವಿಳಂಬವಾಗದಂತೆ ಪಾವತಿ ಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.