ಕರ್ನಾಟಕ

ಬಿಸ್ಕಿಟ್ ತಿಂದು ಪ್ರಜ್ಞೆ ತಪ್ಪಿದ ಪ್ರಯಾಣಿಕರು: ಸಿನಿಮೀಯ ದರೋಡೆ

Pinterest LinkedIn Tumblr


ಬೆಂಗಳೂರು: ಜೋಧಪುರದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿ ಸಿದ್ದ ರೈಲಿನಲ್ಲಿ ದರೋಡೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿಲ್ದಾಣ ದಲ್ಲಿ ಪ್ರಯಾಣಿಕರು ಬಿಸ್ಕೆಟ್‌ನ್ನು ಕೊಂಡು ತಿಂದಿದ್ದಾರೆ.

ಕೆಲ ನಿಮಿಷಗಳಲ್ಲೇ ಮತ್ತು ಬಂದಂತಾಗಿದೆ. ಎಷ್ಟೋ ಸಮಯದ ನಂತರ ಪ್ರಜ್ಞೆ ಬಂದಾಗ ತಮ್ಮ ಬಳಿ ಇದ್ದ ಲಗೇಜ್, ಆಭರಣಗಳು ಕಾಣೆಯಾಗಿರುವುದು ತಿಳಿದು ಗಾಬರಿಯಾಗಿದ್ದಾರೆ.

ಬುಧವಾರ ನಸುಕಿನ ವೇಳೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ರೈಲು ನಿಂತಾಗ ಮಾರಾಟಗಾರರ ಸೋಗಿನಲ್ಲಿ ಬಾಲಕರು ಹತ್ತಿ ಕೊಂಡಿದ್ದಾರೆ. ಅವರ ಬಳಿ ಬಿಸ್ಕೆಟ್ ಕೊಂಡು ತಿಂದ 13 ಮಂದಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಯಾಣಿಕರ ಬಳಿಯಿದ್ದ ಬೆಲೆ ಬಾಳುವ ವಸ್ತುಗಳು, ಚಿನ್ನಾಭರಣವನ್ನು ದೋಚಿ ಬಾಲಕರು ಪರಾರಿಯಾಗಿದ್ದಾರೆ. ಪ್ರಯಾಣಿಕ ರಿಗೆ ಪ್ರಜ್ಞೆ ಬಂದಾಗ ದರೋಡೆ ನಡೆದಿರುವುದು ಅರಿವಿಗೆ ಬಂದಿದೆ.

ನೆಲ್ಲೂರು ಸಮೀಪ ರೈಲನ್ನು ನಿಲ್ಲಿಸಿ ಸ್ಟೇಷನ್ ಸಿಬ್ಬಂದಿಗೆ ಘಟನೆ ಬಗ್ಗೆ ತಿಳಿಸಲಾಗಿದ್ದು, ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಪೊಲೀಸರು ದರೋಡೆಕೋರರ ಗುರುತು ಪತ್ತೆಗಾಗಿ ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದಾರೆ. ಮತ್ತು ಬರುವ ವಸ್ತು ಬೆರೆತ ಬಿಸ್ಕೆಟನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.

Comments are closed.