ಕರ್ನಾಟಕ

ಬಿಜೆಪಿಯಿಂದ ‘ಬೆಂಗಳೂರು ಉಳಿಸಿ‘ ಪಾದಯಾತ್ರೆಗೆ ಚಾಲನೆ

Pinterest LinkedIn Tumblr

ಬೆಂಗಳೂರು: ಸಿದ್ದರಾಮಯ್ಯ ದುರಾಡಳಿತದಿಂದ ಬೆಂಗಳೂರಿಗೆ ಕಳಂಕ ಬಂದಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು, ಬೆಂಗಳೂರು ಉಳಿಸಿ ಆಗ್ರಹದಡಿ ಶುಕ್ರವಾರ ಪಾದಯಾತ್ರೆ ನಡೆಸಿದರು.

ಬಸವನಗುಡಿಯ ಗವಿಗಂಗಾಧರೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಯಿತು. ಮುಂದಿನ 14 ದಿನಗಳ ಕಾಲ ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಯಲಿದೆ.

ಪಾದಯಾತ್ರೆಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಪ್ರಕಾಶ ಜಾವಡೇಕರ್, ಶಾಸಕರಾದ ಅಶೋಕ್, ಸುರೇಶಕುಮಾರ್, ರವಿ ಸುಬ್ರಹ್ಮಣ್ಯ, ನಾರಾಯಣಸ್ವಾಮಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗಿಯಾಗಿದದರು.

ಕಾಂಗ್ರೆಸ್ ಅಂದರೆ ವಿನಾಶ, ಬಿಜೆಪಿ ಅಂದರೆ ವಿಕಾಸ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು. ಸಿದ್ದರಾಮಯ್ಯ ಅಂದರೆ ಮರಳು, ಗೂಂಡಾ ಮಾಫಿಯಾಕ್ಕೆ ಮತ್ತೊಂದು ಹೆಸರು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.

Comments are closed.