ದೆಹಲಿ: ಭಯೋತ್ಪಾದನೆ ವಿರುದ್ಧ ಹೋರಾಟ ಇಸ್ಲಾಂ ವಿರುದ್ಧದ ಹೋರಾಟವಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗು ಭಾರತ ಭೇಟಿಯಲ್ಲಿರುವ ಜೋರ್ಡಾನ್ ದೊರೆ ಅಬ್ದುಲ್ಲಾ 2 ಸಹಮತ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆಗಾಗಿ ಇಬ್ಬರೂ ನಾಯಕರು ಇದೇ ವೇಳೆ ಸಮಾನ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ.
“ಭಯೋತ್ಪಾದನೆ ಹಾಗು ಮೂಲಭೂತವಾದದ ವಿರುದ್ಧ ಹೋರಾಟವೆಂದರೆ ಯಾವುದೇ ಧರ್ಮದ ವಿರುದ್ಧ ಹೋರಾಟವೆಂದಲ್ಲ. ಯುವಕರನ್ನು ದಾರಿ ತಪ್ಪಿಸುವ ಮನಸ್ಥಿತಿಯ ವಿರುದ್ಧದ ಹೋರಾಟ ಇದಾಗಿದೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಆಧುನಿಕ ವಿಜ್ಞಾನದ ಬಳಕೆಯೊಂದಿಗೆ ಯುವಕರು ಇಸ್ಲಾಂನ ಒಳ್ಳೆಯ ವಿಚಾರಗಳಲ್ಲಿ ಭಾಗಿಯಾಗಬೇಕು ಎಂದು ಪ್ರಧಾನಿ ಇದೇ ವೇಳೆ ತಿಳಿಸಿದ್ದಾರೆ.
“ಎಲ್ಲ ಧರ್ಮಗಳೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ. ಆದ್ದರಿಂದ ನಮ್ಮ ಯುವಕರು ಇಸ್ಲಾಂನ ಮಾನವೀಯ ವಿಚಾರಗಳಿಂದ ಪ್ರಭಾ
ವಿತರಾಗಬೇಕು” ಎಂದು ಮೋದಿ ತಿಳಿಸಿದ್ದಾರೆ.
ಭಾರತ ಜಗತ್ತಿನ ಎಲ್ಲ ದೊಡ್ಡ ಧರ್ಮಗಳ ತೊಟ್ಟಿಲಾಗಿದೆ ಎಂದು ಪ್ರಧಾನಿ ಇದೇ ವೇಳೆ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಇ
ಸ್ಲಾಮಿಕ್ ಪರಂಪರೆ ಕುರಿತ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಜೋರ್ಡಾನ್ ದೊರೆ “ಸುದ್ದಿ ಮಾಧ್ಯಮಗಳಲ್ಲಿ ಕೇಳುತ್ತಿರುವುದಾಗಲೀ ನೋಡುತ್ತಿರುವುದಾಗಲೀ ಅತಿಯಾದಾಗ ಜನರು ವಿಭಜಿತರಾಗುತ್ತಿದ್ದಾರೆ. ಪರಸ್ಪರ ಸರಿಯಾಗಿ ತಿಳಿದುಕೊಳ್ಳದ ಕಾರಣ ಬೇರೆ ಬೇರೆ ಗುಂಪುಗಳ ನಡುವೆ ಅನುಮಾನಗಳು ಮೂಡುತ್ತಿವೆ. ಇಂಥ ಸಿದ್ಧಾಂತಗಳು ಗಲಭೆಗೆ ಮುನ್ನುಡಿ ಬರೆಯುತ್ತವೆ” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಮಾತುಗಳನ್ನು ಬೆಂಬಲಿಸಿ ಮಾತನಾಡಿದ ಅಬ್ದುಲ್ಲಾ “ಭಯೋತ್ಪಾದನೆ ವಿರುದ್ಧ ಸಮರವೆಂದರೆ ಧರ್ಮಗಳ ನಡುವಿನ ಸಮರ ಎಂದಲ್ಲ” ಎಂದಿದ್ದಾರೆ.
“ಇಸ್ಲಾಂ ಎಂದರೆ ಮೂಲಭೂತವಾದ ಎಂದಲ್ಲ. ನಮ್ಮ ಎರಡೂ ದೇಶಗಳನ್ನು ಪರಸ್ಪರ ನಂಬಿಕೆ ಹತ್ತಿರ ತಂದಿವೆ. ಮಾನವೀಯತೆ ಎಲ್ಲ ಧರ್ಮಗಳನ್ನೂ ಒಂದುಗೂಡಿಸುತ್ತದೆ” ಎಂದು ಅಬ್ದುಲ್ಲಾ ಇದೇ ವೇಳೆ ಹೇಳಿದ್ದಾರೆ.