ಹಾಸನ: ರಾಷ್ಟ್ರಪತಿ, ಸಿಎಂ ಆಗಮನ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಹಾಸನ ಡಿಸಿ ರೋಹಿಣಿ ಸಿಂಧೂರಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ.
ವೇದಿಕೆ ಮೇಲೆ ಸರಿಯಾದ ಆಸನದ ವ್ಯವಸ್ಥೆ ಆಗಿರಲಿಲ್ಲ. ಖುದ್ದು ಹಾಜರಿದ್ದು ಸ್ವಾಗತ ಮಾಡದೆ ಇರಲು ಕಾರಣಗಳನ್ನು ಇನ್ನು ಮೂರುದಿನದಲ್ಲಿ ನೀಡಬೇಕು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.