ಮನೋರಂಜನೆ

ಮಿಥುನ್‌ ಬಳಿಕ ಕಪೂರ್‌ ವರಿಸಿದ ಶ್ರೀದೇವಿ

Pinterest LinkedIn Tumblr


ಶ್ರೀದೇವಿ ಅವರು ಮೊದಲಿಗೆ 1980 ರಲ್ಲಿ ‘ಝಾಗ್‌ ಉಟಾ ಇನ್ಸಾನ್‌’ ಚಿತ್ರದಲ್ಲಿ ನಟಿಸಿದ್ದ ಮಿಥುನ್‌ ಚಕ್ರವರ್ತಿ ಅವರನ್ನು ಗುಟ್ಟಾಗಿ ಮದುವೆಯಾಗಿದ್ದರು. ಫ್ಯಾನ್ ನಿಯತಕಾಲಿಕೆಯಲ್ಲಿ ಇವರ ಮ್ಯಾರೇಜ್ ಸರ್ಟಿಫಿಕೇಟ್ ಪ್ರಕಟವಾದ ನಂತರ ಮಿಥುನ್ ತಾವು ವಿವಾಹವಾಗಿರುವುದನ್ನು ಒಪ್ಪಿಕೊಂಡಿದ್ದರು. ಈ ವಿಷಯ ಮಿಥುನ್ ಪತ್ನಿ ಯೋಗಿತಾ ಬಾಲಿಗೆ ಗೊತ್ತಾದ ಬಳಿಕ ಮಿಥುನ್ ಮತ್ತೆ ತಮ್ಮ ಪತ್ನಿಯತ್ತ ವಾಪಸಾಗಿದ್ದರು.

1996ರಲ್ಲಿ ಶ್ರೀದೇವಿ ಅವರು ನಿರ್ಮಾಪಕ ಬೋನಿ ಕಪೂರ್‌ ಅವರನ್ನು ಮದುವೆಯಾದರು. ಈ ದಂಪತಿಗೆ ಜಾಹ್ನವಿ ಮತ್ತು ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ನಟರಾದ ಅನಿಲ್‌ ಕಪೂರ್‌ ಮತ್ತು ಸಂಜಯ್‌ ಕಪೂರ್‌ ಬೋನಿ ಕಪೂರ್‌ ಅವರ ಬೋನಿ ಕಪೂರ್‌ ಅವರ ಸೋದರರು. ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ.

ಮಗಳು ಜಾಹ್ನವಿ ನಟಿಸಿದ್ದ ‘ಧಡಕ್‌’ ಚಿತ್ರ ಇನ್ನಷ್ಟೇ ತೆರೆ ಕಾಣಬೇಕಿದ್ದು, ಅದನ್ನು ನೋಡುವ ಮೊದಲೇ ಶ್ರೀದೇವಿ ಇಹಲೋಕ ತ್ಯಜಿಸಿದ್ದಾರೆ.

Comments are closed.