ಕರ್ನಾಟಕ

ಪ್ರಧಾನಿ ಮೋದಿ ರಾಜ್ಯ ಪ್ರವಾಸ: ಬಾಹುಬಲಿ ಮಹಾಮಜ್ಜನ, ಮೈಸೂರು ಬಿಜೆಪಿ ಸಮಾವೇಶದಲ್ಲಿ ಭಾಗಿ

Pinterest LinkedIn Tumblr


ಬೆಂಗಳೂರು: ಬಾಹುಬಲಿ ಮಹಾಮಜ್ಜನ ಹಾಗೂ ಮೈಸೂರು ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲು ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಫೆ.18) ರಾತ್ರಿಯೇ ಮೈಸೂರಿಗೆ ಆಗಮಿಸಲಿದ್ದಾರೆ.

ಐಎಎಫ್​ ವಿಶೇಷ ವಿಮಾನದಲ್ಲಿ ರಾತ್ರಿ 10:25ಕ್ಕೆ ಮುಂಬೈ ಏರ್​ಪೋರ್ಟ್​ನಿಂದ 11ಕ್ಕೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಗರದ ಖಾಸಗಿ ಹೋಟೆಲ್​ನಲ್ಲಿ ಸ್ಥಳ ಕಾಯ್ದಿರಿಸಲಾಗಿದೆ.

ಸೋಮವಾರದ ಮೋದಿ ಪ್ರವಾಸ

ಸೋಮವಾರ (ಫೆ.19) ಬೆಳಗ್ಗೆ 11 ರಿಂದ 11:30 ವರೆಗೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 12:40ಕ್ಕೆ ಲಲಿತ ಮಹಲ್ ಹೆಲಿಪ್ಯಾಡ್​ಗೆ ಆಗಮಿಸುವ ಪ್ರಧಾನಿ, 1:15ಕ್ಕೆ ಶ್ರವಣ ಬೆಳಗೊಳ ಹೆಲಿಪ್ಯಾಡ್​ಗೆ ತಲುಪುವರು. 1:25 ರಿಂದ 2:05 – ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಶ್ರವಣ ಬೆಳಗೊಳದಿಂದ ಮಧ್ಯಾಹ್ನ 2:20ಕ್ಕೆ ಮೈಸೂರಿನತ್ತ ಪಯಣ ಬೆಳೆಸಲಿದ್ದು, 2:50ಕ್ಕೆ ಜೆ.ಕೆ.ಮೈದಾನಕ್ಕೆ ಆಗಮಿಸುತ್ತಾರೆ. 3:00 ರಿಂದ 3:30 ವರೆಗೆ ರೈಲ್ವೆ ಇಲಾಖೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಮೈಸೂರು-ಬೆಂಗಳೂರು ರೈಲ್ವೆ ಜೋಡಿ ಮಾರ್ಗ, ಮೈಸೂರು- ರಾಜಸ್ತಾನ ಹಮ್​ ಸಫರ್ ರೈಲು ಸಂಚಾರಕ್ಕೆ ಹಸಿರು ನಿಶಾನೆ, ಇಎಸ್​ಐ ಆಸ್ಪತ್ರೆ ಉದ್ಘಾಟಿಸಲಿದ್ದಾರೆ.

3:45 ರಿಂದ 4:45- ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿ ಸಂಜೆ 5:10ಕ್ಕೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ಪಯಣಿಸಲಿದ್ದಾರೆ.

Comments are closed.