ಮನೋರಂಜನೆ

ಮಗಳ ವಯಸ್ಸಿನ ಹುಡುಗಿಯೊಂದಿಗೆ 3ನೇ ಮದುವೆಗೆ ಸಿದ್ಧರಾದ ಅನುರಾಗ್​ ಕಶ್ಯಪ್​

Pinterest LinkedIn Tumblr


ಮುಂಬೈ: ಬಾಲಿವುಡ್​ನ ಸ್ಟಾರ್​ ನಿರ್ದೇಶಕ ಅನುರಾಗ್​ ಕಶ್ಯಪ್​ ತನಗಿಂತಲೂ 20 ವರ್ಷ ಚಿಕ್ಕವಳಾದ ಹುಡುಗಿಯೊಂದಿಗೆ ಮೂರನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ.

ಹೌದು 45 ವರ್ಷದ ಅನುರಾಗ್​ ಕಶ್ಯಪ್​ ತಮ್ಮ ಪ್ರೊಡಕ್ಷನ್​ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 23 ವರ್ಷದ ಶುಭ್ರಾ ಶೆಟ್ಟಿಯೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಇಬ್ಬರೂ ತಮ್ಮ ಇನ್​ಸ್ಟಾಗ್ರಾಮ್​ ಖಾತೆಗಳಲ್ಲಿ ಫೋಟೋಗಳನ್ನು ಶೇರ್​ ಮಾಡಿದ್ದು, ಲವ್​ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ.

ಈ ಮೊದಲೇ ಅನುರಾಗ್​ ಕಶ್ಯಪ್​ಗೆ 2 ಬಾರಿ ಮದುವೆಯಾಗಿದ್ದು, ಇಬ್ಬರೂ ಪತ್ನಿಯರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಅನುರಾಗ್​ ಮೊದಲ ಪತ್ನಿ ಆರತಿ ಬಜಾಜ್​ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿಗೆ ಆಲಿಯಾ ಎಂಬ ಮಗಳೂ ಕೂಡ ಇದ್ದಾಳೆ. ಆರತಿಯಿಂದ ಡಿವೋರ್ಸ್​ ಪಡೆದ ನಂತರ ಅನುರಾಗ್​ ನಟಿ ಕಲ್ಕಿ ಕೊಚ್ಲಿನ್​ ಅವರೊಂದಿಗೆ ಸ್ವಲ್ಪ ದಿನಗಳ ಕಾಲ ಲೀವಿಂಗ್​ ಟುಗೆದರ್​ನಲ್ಲಿದ್ದರು. ಆ ನಂತರ ಇಬ್ಬರೂ ಮದುವೆ ಮಾಡಿಕೊಂಡಿದ್ದರು. ಆದರೆ ಇಬ್ಬರ ನಡುವಿನ ಬಂಧನ ಹೆಚ್ಚು ದಿನ ಉಳಿಯದೆ ವಿಚ್ಛೇದನ ಪಡೆದಿದ್ದರು.

ಇದೀನ ಅನುರಾಗ್​ಗೆ ಮೂರನೇ ಬಾರಿ ಲವ್​ ಆಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅನುರಾಗ್​ ನಾನು ಮುದುಕನಾದರೂ ಲವ್​ ಮಾಡುತ್ತಲೇ ಇರುತ್ತೇನೆ ಎಂದು ತಿಳಿಸಿದ್ದಾರೆ. ಸದ್ಯದಲ್ಲೇ ಶುಭ್ರಾ ಶೆಟ್ಟಿಯೊಂದಿಗೆ ಸಪ್ತಪಡಿ ತುಳಿಯುವುದಾಗಿ ಅನುರಾಗ್​ ಹೇಳಿಕೊಂಡಿರುವುದಾಗಿ ಸುದ್ದಿಯಾಗಿದೆ.

Comments are closed.