ಕ್ರೀಡೆ

ಮೊದಲನೇ ಟಿ20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Pinterest LinkedIn Tumblr


ಜೊಹಾನ್ಸ್ ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 28 ರನ್‌ಗಳ ಭರ್ಜರಿ ಜಯ ದೊರೆತಿದೆ.

ಜೊಹಾನ್ಸ್ ಬರ್ಗ್‌ನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ದಕ್ಷಿಣ ಆಫ್ರಿಕಾಗೆ 204ರನ್‌ಗಳ ಗುರಿ ನೀಡಿತ್ತು. ಗುರಿಯ ಬೆನ್ನತ್ತಿದ ದಕ್ಷಿಣ ಆಫ್ರಿಕ 9 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿದೆ. 3 ಟಿ-20 ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ ದೊರೆತಿದೆ.

ದಕ್ಷಿಣ ಆಫ್ರಿಕಾ ಪರ ಸ್ಮಟ್ಸ್ 14, ಹೆನ್ರಿಕ್ಸ್ 70 ರನ್, ಜೆ.ಪಿ.ಡುಮಿನಿ 3, ಮಿಲ್ಲರ್ 9, ಬೆಹಾರ್ಡಿನ್ 39 ರನ್, ಕ್ರಿಸ್ ಮೋರಿಸ್ 0, ಕ್ಲಾಸೆನ್ 16, ಪ್ಯಾಟರ್​ಸನ್ 1, ಌಂಡಿಲ್ 13, ಜೂನಿಯರ್ ಡಾಲಾ 2 ರನ್‌ ಮತ್ತು ಶಮ್ಸಿ ಅಜೇಯರಾಗಿ ಉಳಿದಿದ್ದಾರೆ.

ಭಾರತದ ಪರ ಭುವನೇಶ್ವರ್ ಕುಮಾರ್​​ಗೆ 5 ವಿಕೆಟ್​, ಹಾರ್ದಿಕ್, ಉನಾದ್ಕತ್, ಚಾಹಲ್​ ತಲಾ 1 ವಿಕೆಟ್​ ಕಬಳಿಸಿದ್ದಾರೆ.

Comments are closed.