
ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ನಮ್ಮ ಹುಡುಗಿಗೆ ಎಂಥ ಹುಡುಗ ಬೇಕು? ನಮ್ಮ ಹುಡುಗನಿಗೆ ಯಾವ ಹೆಣ್ಣು ಸರಿ ಹೊಂದುತ್ತಾಳೆ ಎಂದು ಹಿರಿಯರು ನಿರ್ಧರಿಸಿ ಮದುವೆ ಮಾಡುವ ಕಾಲ ನಿಧಾನಕ್ಕೆ ಬದಲಾಗುತ್ತಿದೆ.
ಹೆಚ್ಚಿನ ಪೋಷಕರು ‘ಬಾಳ ಬೇಕಾದವರು ನೀವು, ನಿಮ್ಮ ಜೋಡಿಯನ್ನು ನೀವೇ ಹುಡುಕಿಕೊಳ್ಳಿ’ ಎಂದು ಹೇಳುವ ಮೂಲಕ ಮಕ್ಕಳಿಗೆ ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡುತ್ತಿದ್ದಾರೆ.
ಬಾಳ ಸಂಗಾತಿಯನ್ನು ಹುಡುಕಿ ಕೊಡುವಲ್ಲಿ ಮ್ಯಾಟ್ರಿಮೋನಿ ಸೈಟ್ಗಳು ಬ್ಯುಸಿಯಾಗಿವೆ. ಆದರೆ ನಾವು ಯಾರ ಜತೆ ಬಾಳಬೇಕೆಂದು ನಿರ್ಧರಿಸುವುದು ಮಾತ್ರ ಅಷ್ಟು ಸುಲಭದ ಕೆಲಸವಲ್ಲ. ಮೊದಲ ನೋಟಕ್ಕೆ ಆಕರ್ಷಿಸುವವ ಅವರ ನೋಟ, ಉದ್ಯೋಗ, ಹಣ, ಸಂಪತ್ತು ಯಾವುದೂ ಸುಂದರ ದಾಂಪತ್ಯಕ್ಕೆ ಮಾನದಂಡವಲ್ಲ ಎಂದು ತಿಳಿಯುವುದು ಸಂಸಾರ ಪ್ರಾರಂಭಿಸಿದ ಮೇಲೆ. ದಾಂಪತ್ಯದಲ್ಲಿ ಒಬ್ಬರನ್ನೊಬ್ಬರು ಹೇಗೆ ಅರ್ಥ ಮಾಡಿಕೊಂಡು ಜೀವನ ಸಾಗಿಸುತ್ತೇವೆ ಎನ್ನುವುದರ ಮೇಲೆ ಅದರ ಸುಖ ಅಡಗಿದೆ.
ಆದ್ದರಿಂದ ಲೈಫ್ ಪಾರ್ಟ್ನರ್ ಆಯ್ಕೆ ಮಾಡುವಾಗ ಈ ಅಂಶ ತಿಳಿದಿದ್ದರೆ ನಿಮ್ಮ ಆಯ್ಕೆಯ ಸಂಗಾತಿ ಜತೆ ಖುಷಿಯಾಗಿ ಜೀವನ ಸಾಗಿಸಬಹುದು.
1. ನೀವು ನೀವಾಗಿ ಇರಿ
ನಿಮ್ಮದಲ್ಲದ ವ್ಯಕ್ತಿತ್ವದ ಮುಖವಾಡ ಹಾಕಿ ಯಾರನ್ನು ಮೆಚ್ಚಿಸಬೇಕಾಗಿಲ್ಲ. ಅಲ್ಲದೆ ಮುಖವಾಡ ಹಾಕಿದರೆ ಒಂದಲ್ಲಾ ಒಂದು ದಿನ ಕಳಚಿ ಬಿದ್ದೇ ಬೀಳುತ್ತದೆ. ಅಲ್ಲದೆ ಬೇರೆಯವರಿಗಾಗಿ ನಿಮ್ಮನ್ನು ನೀವು ತುಂಬಾ ಬದಲಾಯಿಸಲು ಹೋದರೆ ನಿಮ್ಮತನ ಕಳೆದು ಹೋಗಿ ಉಸಿರು ಕಟ್ಟಿದ ಅನುಭವ ಉಂಟಾಗುವುದು ಆದ್ದರಿಂದ ನೀವು ನೀವಾಗಿ ಇರಿ.
2. ನಿಮ್ಮ ಭಾವನೆಗಳಿಗೆ ಬೆಲೆ ಕೊಡುವವರು ಆಗಿರಲಿ
ನೀವು ಅವರ ಭಾವನೆಗಳಿಗೆ ಎಷ್ಟು ಬೆಲೆ ಕೊಡುತ್ತೀರೋ, ಅವರು ಕೂಡ ನಿಮ್ಮ ಭಾವನೆಗಳಿಗೆ ಬೆಲೆ ಕೊಡುವವರು ಆಗಿರಬೇಕು. ಇಲ್ಲದಿದ್ದರೆ ಅಂಥವರ ಜತೆ ಬಾಳುವುದು ನರಕವೆನಿಸುವುದು.
3. ಡೇಟಿಂಗ್ ಹೋದ ದಿನವೇ ನಿರ್ಧಾರಕ್ಕೆ ಬರಬೇಡಿ
ಅವರನ್ನು ಚೆನ್ನಾಗಿ ಅರಿತುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಅವರನ್ನು ಅರ್ಥ ಮಾಡಿಕೊಳ್ಳಿ, ನಂತರ ಅವರು ನಿಮಗೆ ಸೂಕ್ತ ಅನಿಸಿದರೆ ಮುಂದುವರೆಯಿರಿ.
Comments are closed.