ರಾಷ್ಟ್ರೀಯ

ಭಾರತೀಯ ಮಕ್ಕಳು ಹುಟ್ಟು ರಾಜಕಾರಣಿಗಳು: ‘ಪರೀಕ್ಷಾ ಪೆ ಚರ್ಚೆ’ಯಲ್ಲಿ ಪ್ರಧಾನಿ ಮೋದಿ

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೆ ತಮ್ಮ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದ ಮೂಲಕ ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಹಲವು ಸಲಹೆಗಳನ್ನು ನೀಡಿದ್ದು, ಶುಕ್ರವಾರ ಮುಖಾಮುಖಿ ಆಗಿ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ಹೇಗೆ ಎಂಬ ಸಲಹೆಗಳನ್ನು ನೀಡಿದರು.

ಇಂದು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಭಾರತೀಯ ಮಕ್ಕಳು ಹುಟ್ಟು ರಾಜಕಾರಣಿಗಳು. ತಮ್ಮ ಕೆಲಸ ಹೇಗೆ ಮಾಡಬೇಕು ಎಂಬುದು ಅವರಿಗೆ ಗೊತ್ತಿರುತ್ತದೆ ಎಂದರು.

ಇತರೆ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡುವುದು ಬೇಡ ಮತ್ತು ಪೋಷಕರು ಸಹ ಮಕ್ಕಳ ಮೇಲೆ ಅನಗತ್ಯವಾಗಿ ಒತ್ತಡ ಹೇರಬಾರದು ಎಂದ ಪ್ರಧಾನಿ, ಪ್ರತಿ ಮಗು ಸಹ ಭಿನ್ನವಾಗಿರುತ್ತದೆ. ಹೀಗಾಗಿ ಅವರು ಯಾವುದರಲ್ಲಿ ಉತ್ತಮರು ಎಂಬುದನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡಿ. ಆದರೆ ನಮ್ಮ ಕನಸನ್ನು ಅವರ ಹೇರುವುದು ಬೇಡ ಎಂದರು.

ಪರೀಕ್ಷೆಗಳೆಂದರೆ ಭಯಪಡಬೇಡಿ. ಅದನ್ನು ಸಹ ಹಬ್ಬದಂತೆ ಭಾವಿಸಬೇಕು. ತುಂಬಾ ಉತ್ಸಾಹದಿಂದ ಪರೀಕ್ಷೆಗಳನ್ನು ಬರೆಯಬೇಕೆಂದರು. ಅಷ್ಟೇ ಅಲ್ಲದೆ ಸಾಮಾಜಿಕ ಮಾಧ್ಯಮದ ಮೂಲಕ ಬಂದ ಪ್ರಶ್ನೆಗಳಿಗೂ ಮೋದಿ ಉತ್ತರಿಸಿದರು. ಒಳ್ಳೆಯ ಅಂಕಗಳ ರಹಸ್ಯ ಮನಸ್ಸನ್ನು ಉತ್ಸಾಹವಾಗಿ ಇಟ್ಟುಕೊಳ್ಳುವುದು ಎಂದು ಮೋದಿ ಹೇಳಿದರು. ಹೆಚ್ಚಾಗಿ ಉಲ್ಲಾಸ ಉತ್ಸಾಹದಿಂದ ಇರುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಪರೀಕ್ಷೆಗಳನ್ನು ಚೆನ್ನಾಗಿ ಬರೆದು ಯಶಸ್ವಿಯಾಗಬಹುದು ಎಂದು ಪ್ರಧಾನಿ ಸಲಹೆ ನೀಡಿದರು.

Comments are closed.