ರಾಷ್ಟ್ರೀಯ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಅವ್ಯವಹಾರದ ಸಂಪೂರ್ಣ ಮಾಹಿತಿ

Pinterest LinkedIn Tumblr


ಹೊಸದಿಲ್ಲಿ: ದೇಶದ ಅತಿ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್‌ ನ್ಯಾಷನಲ್‌ ಯೂನಿಯನ್‌ ಬ್ಯಾಂಕ್‌ನಲ್ಲಿ ನಡೆದ 11,360 ಕೋಟಿ ರೂ . ಮೊತ್ತದ ಅವ್ಯವಹಾರ ಪ್ರಕರಣ ಬಯಲಿಗೆಳೆದ ಬೆನ್ನಿಗೆ ಬ್ಯಾಂಕ್‌ ಕುರಿತು ಇನ್ನಷ್ಟು ಮಾಹಿತಿಗಳು ಹೊರಬರತೊಡಗಿದ್ದು ಈ ಪ್ರಕರಣ ನಡೆದು ಬಂದ ಹಾದಿ ಇಲ್ಲಿದೆ.

ಏನಿದು ಪ್ರಕರಣ?
ಕೇಂದ್ರಿಯಾ ತನಿಖಾ ಸಂಸ್ಥೆಗೆ ನೀಡಿರುವ ದೂರಿನ ಅನ್ವಯ ಬ್ಯಾಂಕ್ ನಲ್ಲಿ ನಡೆದ 11,300 ಕೋಟಿ ರೂಪಾಯಿ ಅಕ್ರಮ ವಹಿವಾಟಿಗೂ ಖ್ಯಾತ ಆಭರಣ ವಿನ್ಯಾಸಕ ನೀರವ್ ಮೋದಿಗೂ ಸಂಬಂಧ ಇದೆ ಎಂದು ಪಿಎನ್‌ಬಿ ಆರೋಪಿಸಿತ್ತು. ಈ ಪ್ರಕರಣದ 2011ರಿಂದಲೇ ನಡೆಯುತ್ತಿದ್ದು ಮೋದಿಗೆ ಪಿಎನ್‌ಬಿಯ ಮುಂಬಯಿ ಬ್ರಾಂಚ್‌ನ ಮ್ಯಾನೇಜರ್‌ ಗೋಕುಲ್‌ನಾಥ್‌ ಶೆಟ್ಟ ಮತ್ತು ಎಂ.ಎಚ್‌ ಖರಾತ್‌ ಕಾನೂನುಬಾಹಿರವಾಗಿ ಈ ಖಾತರಿ ಪತ್ರಗಳನ್ನು ಮೋದಿ ಕಂಪನಿಗಳಿಗೆ ನೀಡಿದ್ದರು.

ಪ್ರಕರಣ ನಡೆದು ಬಂದ ಹಾದಿ

ನೀರವ್‌ ಅವರಿಗೆ 2011ರಲ್ಲಿ ಸಾಲ ನೀಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ವಂಚನೆ ಸಾಗುತ್ತಲೇ ಬಂದಿದೆ, ಶೆಟ್ಟಿ ಅಕ್ರಮವಾಗಿ ಖಾತರಿ ಪತ್ರವನ್ನು ಮೋದಿ ಕಂಪನಿಗೆ ನೀಡುತ್ತಲೇ ಬಂದಿದ್ದರು, ಅಲ್ಲದೇ ಈ ಅಕ್ರಮವನ್ನು ಮುಚ್ಚಿಡುವುದಕ್ಕಾಗಿ ಬ್ಯಾಂಕ್‌ನ ಕೋರ್‌ ಬ್ಯಾಂಕಿಂಗ್ ಕಂಪ್ಯೂಟರ್‌ ವ್ಯವಸ್ಥೆಯಲ್ಲಿ ಈ ಪತ್ರದ ಕುರಿತು ಯಾವುದನ್ನೂ ನಮೂದಿಸಿಯೇ ಇರಲಿಲ್ಲ.

ಈ ದಾಖಲೆಗಳನ್ನು ಇಟ್ಟುಕೊಂಡು ಮೋದಿಯ ಮೂರು ಕಂಪನಿಗಳು ಸಾಗರದಾಚೆಗಿನ ಭಾರತೀಯ ಮೂಲದ ಬ್ಯಾಂಕ್‌ಗಳಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದಾರೆ ಎಂದು ಬ್ಲೂಂಬರ್ಗ್‌ನಲ್ಲಿ ದಾಖಲಾದ ಮಾಹಿತಿಯಿಂದ ಪಿಎನ್‌ಬಿ ತಿಳಿದುಕೊಂಡಿದೆ.

ಬೆಳಕಿಗೆ ಬಂದಿದ್ದಾದರೂ ಹೇಗೆ?

ಕಳೆದ ತಿಂಗಳು ಮೋದಿ ಕಂಪನಿಯಂದ ನಾಲ್ವರು ಅಧಿಕಾರಿಗಳು ಹೊಸ ಸಾಲ ಕೇಳಿಕೊಂಡು ಪಿಎನ್‌ಬಿಯನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಇವರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಬ್ಯಾಂಕ್‌ ಅಧಿಕಾರಿಗಳಿಗೆ ನಕಲಿ ಎಂದು ತಿಳಿದುಕೊಂಡು ಕೂಡಲೇ ದೂರು ದಾಖಲಿಸಿದ್ದಾರೆ.

ಮೊದಲಿಗೆ ಈ ಬ್ಯಾಂಕಿನಲ್ಲಿ 44 ಮಿಲಿಯನ್‌ ಡಾಲರ್‌ ಅವ್ಯವಹಾರ ಪತ್ತೆಯಾಗಿತ್ತು, ಆದರೆ ಎರಡು ವಾರದ ಬಳಿಕ ಮತ್ತೊಮ್ಮೆ ದೂರು ದಾಖಲಿಸಿದ ಪಿಎನ್‌ಬಿ 1.17 ಬಿಲಿಯನ್‌ ಡಾಲರ್‌ ವಂಚನೆಯಾಗಿದೆ ಎಂದು ದಾಖಲಿಸಲಾಗಿತ್ತು.

ನಷ್ಟಕ್ಕೊಳಪಟ್ಟ ಬ್ಯಾಂಕ್‌ಗಳು ಇವು!

ಮಾಹಿತಿಗಳ ಪ್ರಕಾರ ಅಲಹಾಬಾದ್ ಬ್ಯಾಂಕ್ ಸುಮಾರು 40 ಶತಕೋಟಿ ಹಣವನ್ನು ಸಾಲವಾಗಿ ನೀಡಿದ್ದರೆ, ಆಕ್ಸಿಸ್ ಬ್ಯಾಂಕ್ ಸುಮಾರು 30 ಶತಕೋಟಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮತ್ತು ಯೂನಿಯನ್ ಬ್ಯಾಂಕ್‌ನಿಂದ ಸುಮಾರು 20 ಶತಕೋಟಿ ಡಾಲರ್‌ಗಳಷ್ಟು ಮೊತ್ತ ಸಾಲವಾಗಿ ನೀಡಿದೆ ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿ ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕೋರಿ ಕಳುಹಿಸಲಾಗಿದ್ದ ಇ-ಮೇಲ್‌ಗೆ ಪ್ರತಿಕ್ರಿಯೆ ನೀಡಿಲ್ಲ ಅಲ್ಲದೇ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಕ್ರಮಕ್ಕೆ ಮುಂದಾಗಿರುವ ಸರಕಾರ

ನೀರವ್‌ ಮೋದಿ ಅವರ ಕಂಪನಿಗಳಿಂದ ಭಾಗಶಃ ಸಾಲ ವಸೂಲಿ ಮಾಡಬಹುದು ಎಂದು ಭರವಸೆ ವ್ಯಕ್ತಪಡಿಸಿರುವ ಪಿಎನ್‌ಬಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸುನಿಲ್ ಮೆಹ್ತಾ ಈಗಾಗಲೇ ಇಡಿಗೂ ದೂರು ದಾಖಲಿಸಿದ್ದಾರೆ.

ಅಲ್ಲದೇ ಕೇಂದ್ರ ಸರಕಾರ ಈಗಾಗಲೇ ಎಲ್ಲಾ ಬ್ಯಾಂಕ್‌ಗಳಿಗೂ ಎರಡು ವಾರದೊಳಗೆ ವರದಿ ಸಲ್ಲಿಸುವಂತೆ ಹೇಳಿತ್ತು. ಇದೇ ವೇಳೆಗೆ ಪಿಎನ್‌ಬಿ ತನ್ನ ಕಂಪನಿಯಿಂದ 10 ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಿ ಅವರ ವಿರುದ್ಧ ದೂರು ದಾಖಲಿಸಿದೆ.

Comments are closed.