ಕರ್ನಾಟಕ

ಮೋದಿ ಆಡಳಿತಕ್ಕೆ ಆರ್‌ಎಸ್‌ಎಸ್‌, ವಿಎಚ್‌ಪಿ ರಿಮೋಟ್‌ ಕಂಟ್ರೋಲ್‌: ಖರ್ಗೆ

Pinterest LinkedIn Tumblr


ಚಿತ್ತಾಪುರ: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಯಂ ಬುದ್ಧಿಯಿಂದ ಸರಕಾರ ನಡೆಸುತ್ತಿಲ್ಲ. ಆರೆಸ್ಸೆಸ್ ಮತ್ತು ವಿಎಚ್ಪಿ ರಿಮೋಟ್ ಕಂಟ್ರೋಲ್‌ ಹಿಡಿದು ಅವುಗಳ ಉದ್ದೇಶದಂತೆ ಸರಕಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಚಿತ್ತಾಪುರ-ಶಹಾಬಾದ್ ಪಟ್ಟಣದಲ್ಲಿ ಸಂಸದ ಮಲ್ಲಿಕಾಜು೯ನ ಖಗೆ೯ ಸುದ್ದಿಗಾರರೊಂದಿಗೆ ಮಾತನಾಡಿದರು.

ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗದೆ ಉದ್ಯಮಿಗಳ ಒಂದು ಲಕ್ಷ ಹತ್ತು ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ ಪ್ರಧಾನಿ ಮೋದಿ. ಇದು ಬಡವರ ದೀನ ದಲಿತರ ರಕ್ಷಣೆ ಮಾಡುವ ಸರ್ಕಾರವಲ್ಲ ಎಂದು ಅವರು ದೂರಿದರು.

ಅಂಬಾನಿ, ಆದಾನಿಯಂಥ ಉದ್ಯಮಿಗಳನ್ನು ರಕ್ಷಣೆ ಮಾಡುವ ಸರಕಾರವಾಗಿದೆ. ಕಪ್ಪು ಹಣವನ್ನು ವಿದೇಶಗಳಿಂದ ತರುತ್ತೇನೆಂದು ಮೋದಿ ಹೇಳಿದ್ದರು. ಆದರೆ ಕಪ್ಪು ಹಣ ಇದ್ದವರೆಲ್ಲಾ ಇವತ್ತು ಮೋದಿ ಸುತ್ತಲೂ ಸುತ್ತುತ್ತಿದ್ದಾರೆ. ಇಂಥವರಿಂದ ಜನ ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎಂದು ಖರ್ಗೆ ಪ್ರಶ್ನಿಸಿದರು.

ಚುನಾವಣೆ ಹತ್ತಿರವಾಗುತ್ತಿದೆ ಜನರು ಸುಳ್ಳುಗಳನ್ನು ನಂಬಿ ಮತ ಹಾಕಬೇಡಿ. ನರೇಂದ್ರ ಮೋದಿ ಮಹಾನ್ ಸುಳ್ಳುಗಾರ. ಕಳೆದ ನಾಲ್ಕು ವರ್ಷಗಳಿಂದ ವಿದೇಶ ತಿರುಗಾಡಿದ್ದೇ ಅವರ ಮಹಾನ್‌ ಸಾಧನೆ ಎಂದು ಮಲ್ಲಿಕಾರ್ಜುನ ಖರ್ಗೆ ಗುಡುಗಿದರು.

Comments are closed.