ನವದೆಹಲಿ: ದೇಶದ ವಿವಿಧೆಡೆ ವ್ಯಾಲೆಂಟೈನ್ಸ್ ಡೇ ಆಚರಿಸುವುದಕ್ಕೆ ಬಜರಂಗದಳ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಗುಜರಾತ್ನ ಅಹ್ಮದಾಬಾದ್ನಲ್ಲಿ ಬಜರಂಗದಳ ಕಾರ್ಯಕರ್ತರು ಕೈಯಲ್ಲಿ ಕೋಲು ಹಿಡಿದು ಪ್ರೇಮಿಗಳನ್ನು ಅಟ್ಟಾಡಿಸಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಪಾರ್ಕ್, ರಸ್ತೆ ಪಕ್ಕದಲ್ಲಿ ನಿಂತಿದ್ದ ಜೋಡಿಗಳ ಮೇಲೆ ನೈತಿಕ ಪೊಲೀಸ್ ಗಿರಿ ತೋರಿದ್ದಾರೆ.
ಇನ್ನು ಚೆನ್ನೈನಲ್ಲೂ ಪ್ರೇಮಿಗಳ ದಿನಾಚರಣೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ನಾಯಿ ಹಾಗೂ ಕತ್ತೆಗೆ ಮದುವೆ ಮಾಡಿಸುವ ಮೂಲಕ ಬಜರಂಗದಳ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ಮಾಡಿದರು.
ಹೈದರಾಬಾದ್ನಲ್ಲೂ ವ್ಯಾಲೆಂಟೈನ್ಸ್ ಡೇಗೆ ವಿರೋಧ ವ್ಯಕ್ತವಾಯಿತು. ಬಜರಂಗದಳ ಕಾರ್ಯಕರ್ತರು ನಡುರಸ್ತೆಯಲ್ಲೇ ಪ್ರತಿಕೃತಿ ದಹಿಸಿ ವಿರೋಧ ವ್ಯಕ್ತಪಡಿಸಿದರು.