ಕರ್ನಾಟಕ

ಮೂರು ರಾಜ್ಯಗಳ ಗಡಿ ವಿವಾದದಲ್ಲಿ ದೋಣಿಮಡುಗು ಮಲ್ಲೇಶ್ವರ ದೇಗುಲ

Pinterest LinkedIn Tumblr


ಕೋಲಾರ: ಗಡಿಯಲ್ಲಿನ ಪುರಾತನ ದೇವಾಲಯದ ಮೇಲೆ ಆಂಧ್ರಪ್ರದೇಶ ಕಣ್ಣಿದ್ದುದ್ದರಿಂದ ಮೂರು ರಾಜ್ಯಗಳ ಗಡಿಯಲ್ಲಿರುವ ದೇಗುಲ ವಿವಾದದ ಗೂಡಾಗಿ ವರ್ಷ ಕಳೆದರೂ ಇತ್ಯರ್ಥವಾಗಿಲ್ಲ.

ಆಂಧ್ರ, ಕರ್ನಾಟಕ, ತಮಿಳುನಾಡು ಗಡಿಯ ಬಂಗಾರಪೇಟೆ ತಾಲೂಕಿನ ಗಡಿ ದೋಣಿಮಡುಗು ಗ್ರಾಮದ ಮಲ್ಲೇಶ್ವರ ದೇವಾಲಯವೇ ವಿವಾದದ ಕೇಂದ್ರ ಬಿಂದು.

ತಿರುಪತಿ ತಿಮ್ಮಪ್ಪನ ದೇವಸ್ಥಾನದ ರೀತಿಯಲ್ಲಿ ಪ್ರಸಿದ್ಧಿ ಪಡೆದಿರುವ ಈ ದೇಗುಲದ ಬೆಟ್ಟದಲ್ಲಿ ನಿಧಿ, ನಿಕ್ಷೇಪವಿದೆ ಎನ್ನುವ ಮಾತಿದೆ. ಈ ಬೆಟ್ಟ ಆಂಧ್ರಕ್ಕೆ ಸೇರಿದ್ದು ಎಂದು ಕಳೆದ ವರ್ಷದ ಶಿವರಾತ್ರಿಯಂದು ಚಂದ್ರಬಾಬು ನಾಯ್ಡು ವಿವಾದ ಹುಟ್ಟು ಹಾಕಿದರು.

ಇನ್ನು ಮಲ್ಲೇಶ್ವರಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ದೇವಾಲಯದ ಗರ್ಭಗುಡಿ ಕರ್ನಾಟಕ ರಾಜ್ಯಕ್ಕೆ ಸೇರುತ್ತೆ. ಆದರೆ, ದೇವಾಲಯದ ಆವರಣ ಆಂಧ್ರಪ್ರದೇಶಕ್ಕೆ ಸೇರುತ್ತೆ ಅನ್ನೋ ವಿವಾದ ಎದ್ದಿದೆ. ವರ್ಷದ ಹಿಂದೆಯೇ ಎರಡೂ ರಾಜ್ಯಗಳಿಗೆ ನೊಟೀಸ್ ಜಾರಿ ಮಾಡಿ ಸರ್ವೇ ಮಾಡುವ ಕುರಿತು ಮಾಹಿತಿ ನೀಡಿದ್ದರು. ಆಂಧ್ರ ಹಾಗೂ ತಮಿಳುನಾಡು ಅಧಿಕಾರಿಗಳು ಗೈರಾಗಿ ವಿವಾದ ಮುಂದುವರಿಸಿದ್ದಾರೆ.

Comments are closed.