ರಾಷ್ಟ್ರೀಯ

ಹಜ್‌ ಸಬ್ಸಿಡಿ ಸ್ಥಗಿತ, ಕ್ರಿಶ್ಚಿಯನ್ನರಿಗೆ ಉಚಿತ ಜೆರುಸಲೆಂ ಪ್ರವಾಸ!

Pinterest LinkedIn Tumblr


ಹೊಸದಿಲ್ಲಿ: ಪವಿತ್ರ ಸ್ಥಳ ಹಜ್‌ ಯಾತ್ರಿಕರಿಗೆ ನೀಡುತ್ತಿದ್ದ ಸರಕಾರಿ ಅನುದಾನವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಬಿಜೆಪಿ ಸರಕಾರ, ನಾಗಾಲ್ಯಾಂಡ್‌ನಲ್ಲಿ ಒಂದು ವೇಳೆ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕ್ರಿಶ್ಚಿಯನ್ನರಿಗೆ ಉಚಿತ ಜೆರುಸಲೆಂ ಪ್ರವಾಸ ಮಾಡಿಸುವುದಾಗಿ ಭರವಸೆ ನೀಡಿದೆ ಎಂದು ಈಶಾನ್ಯ ಸುದ್ದಿ ಕೇಂದ್ರಗಳು ವರದಿ ಮಾಡಿವೆ.

ಮೇಘಾಲಯ, ನಾಗಾಲ್ಯಾಂಡ್‌ ಹಾಗೂ ತ್ರಿಪುರಾದಲ್ಲಿ ಇದೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಅಧಿಕಾರ ಪಡೆದುಕೊಳ್ಳಲು ಬಿಜೆಪಿ ಹಂಬಲಿಸುತ್ತಿದೆ. ಮೇಘಾಲಯದಲ್ಲಿ ಸುಮಾರು ಶೇ.75ರಷ್ಟು ಮತ್ತು ನಾಗಾಲ್ಯಾಂಡ್‌ನಲ್ಲಿ, ಶೇ.88ರಷ್ಟು ಕ್ರಿಶ್ಚಿಯನ್ ಜನಸಂಖ್ಯೆಯಿದೆ.
ಈ ಮತಗಳನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ಉಚಿತ ಜೆರುಸಲೆಂ ಪ್ರವಾಸ ಭರವಸೆ ನೀಡಿದೆ.

ಆದರೆ ಬಿಜೆಪಿ ಕೇವಲ ನಾಗಾಲ್ಯಾಂಡ್‌ ಕ್ರೈಸ್ತರಿಗೆ ಮಾತ್ರ ಈ ಯೋಜನೆ ನೀಡಿದೆಯೋ ಅಥವಾ ದೇಶದೆಲ್ಲಾ ಕ್ರೈಸ್ತರಿಗೆ ಈ ಯೋಜನೆಯ ಫಲವನ್ನು ನೀಡುತ್ತದೆಯೇ ಎಂಬುದಕ್ಕೆ ಸ್ಪಷ್ಟ ಉತ್ತರ ಇನ್ನೂ ದೊರೆತಿಲ್ಲ.

‘ನಾಗಾಲ್ಯಾಂಡ್‌ನಲ್ಲಿ ಅಧಿಕಾರಕ್ಕೆ ಬಂದರೆ ಜೆರುಸಲೆಂಗೆ ಉಚಿತ ಪ್ರಯಾಣದ ಬಗ್ಗೆ ಚುನಾವಣಾ ಭರವಸೆಯನ್ನು ಬಿಜೆಪಿ ನೀಡಿದೆ”ಎಂದು ಸ್ಥಳೀಯ ಸುದ್ದಿ ಸಂಸ್ಥೆ ‘ವಿ ದಿ ನಾಗಾಸ್’ ಟ್ವೀಟ್ ಮಾಡಿದೆ. ನಾಗಾಲ್ಯಾಂಡ್ ಕ್ರೈಸ್ತರಿಗೆ ಮಾತ್ರ ಉಚಿತ ಜೆರುಸ್ಲೇಮ್ ಟ್ರಿಪ್ ನೀಡಲಾಗಿದೆ ಯುಎನ್‌ಐ ಎಂಬ ಸುದ್ದಿ ಸಂಸ್ಥೆ ವರದಿ ಮಾಡಿದೆ.

Comments are closed.