ಕರ್ನಾಟಕ

ರೊಮ್ಯಾಂಟಿಕ್‌ ಲೈಫ್‌ಗೆ ಬೇಕಿಲ್ಲ ಆಕರ್ಷಕ ದೇಹ

Pinterest LinkedIn Tumblr


ಸಂಗಾತಿಯನ್ನು ಆಯ್ಕೆ ಮಾಡುವಾಗ ಹೆಚ್ಚಿನವರು ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಪ್ರೀತಿ ಹುಟ್ಟಲು ನೋಡಲು ಆಕರ್ಷಕವಾಗಿರಬೇಕು, ನಾನು ಚೆನ್ನಾಗಿದ್ದೇನೆ ಆದ್ದರಿಂದ ನನ್ನ ಜೋಡಿಯೂ ಆಕರ್ಷಕವಾಗಿ ಕಾಣಬೇಕು ಎಂದೆಲ್ಲಾ ಬಯಸುತ್ತಾರೆ.

ಸುಂದರ ಮೈಮಾಟವೊಂದಿದ್ದರೆ ನಿಮ್ಮ ರೊಮ್ಯಾಂಟಿಕ್‌ ಲೈಫ್‌ ಅದ್ಭುತವಾಗಿರುತ್ತದೆ ಎಂದೆಲ್ಲ ಕನಸು ಕಂಡಿದ್ದರೆ ಮೊದಲು ಅದರಿಂದ ಹೊರ ಬನ್ನಿ. ಏಕೆಂದರೆ ದೇಹದ ಆಕರ್ಷಣೆಗೂ ಸುಂದರವಾದ ರೋಮ್ಯಾಂಟಿಕ್‌ ಜೀವನಕ್ಕೂ ಸಂಬಂಧವೇ ಇಲ್ಲ ಎಂದಿದೆ ಇತ್ತೀಚಿನ ಸಮೀಕ್ಷೆ.

ಸುಂದರ ಮೈಮಾಟ ನಿಮ್ಮಲ್ಲಿ ಆಕರ್ಷಣೆ ಹುಟ್ಟಿಸಬಹುದು. ಆದರೆ ಅದೇ ನಿಮ್ಮ ಬದುಕಿನಲ್ಲಿ ಖುಷಿಯನ್ನು ತಂದು ಕೊಡುವ ಸಂಗತಿ ಅಲ್ಲ. ಆದ್ದರಿಂದ ನಿಮ್ಮಿಬ್ಬರ ಖುಷಿ ನಿಮ್ಮ ಸಂಪೂರ್ಣ ವ್ಯಕ್ತಿತ್ವದ ಮೇಲೆ ಇದೆ. ಬಾಹ್ಯ ಸೌಂದರ‍್ಯದಷ್ಟೆ ಆಂತರಿಕ ಸೌಂದರ‍್ಯ ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ ಸಂಬಂಧಗಳ ತಜ್ಞರು.

Comments are closed.