ಕರ್ನಾಟಕ

ವೇತನ ಹೆಚ್ಚಳಕ್ಕೆ ಪಿಯು ಉಪನ್ಯಾಸಕರ ಕರಾಳ ಶಿವರಾತ್ರಿ

Pinterest LinkedIn Tumblr


ಬೆಂಗಳೂರು: ಪಿಯು ಉಪನ್ಯಾಸಕರ ವೇತನ ಹೆಚ್ಚಳದ ಬೇಡಿಕೆ ಆರನೇ ವೇತನ ಆಯೋಗದಲ್ಲಿ ಸರಿ ಹೋಗಿಲ್ಲ ಎಂದು ದೂರಿ ಶಿವರಾತ್ರಿ ಹಬ್ಬವನ್ನು ಕರಾಳ ಶಿವರಾತ್ರಿಯನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ.

ಸರಕಾರ ಬೇಡಿಕೆ ಈಡೇರಿಸದಿದ್ದರೆ ಮೌಲ್ಯಮಾಪನ ಬಹಿಷ್ಕರಿಸಲು ಕೂಡನಿರ್ಧರಿಸಿರುವುದಾಗಿ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.

ಸರಕಾರ ಬೇಡಿಕೆ ಈಡೇರಿಸುವುದಾದರೆ ಪ್ರತಿಭಟನೆ ಹಿಂತೆಗೆಯುವುದಾಗಿ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಹೇಳಿದ್ದಾರೆ. ಕಳೆದ 25ವರ್ಷಗಳಿಂದ ಸಮಸ್ಯೆ ಬಗೆಹರಿದಿಲ್ಲ. 18ದಿನ ಐತಿಹಾಸಿಕ ಪ್ರತಿಭಟನೆ ನಡೆಸಿದ್ದೆವು. ಆಗ ಬರೆದುಕೊಟ್ಟಿದ್ದರೂ ಯಾವುದನ್ನೂ ಜಾರಿಗೊಳಿಸಿಲ್ಲ. ಮೂಲ ವೇತನದಲ್ಲೇ ಹತ್ತು ಸಾವಿರದಷ್ಟು ವ್ಯತ್ಯಾಸ ಕಂಡುಬಂದಿದೆ. ಬೇಡಿಕೆ ಈಡೇರದಿದ್ದರೆ 27ರಂದು ನಮ್ಮದೇ ನಿಲುವು ತಾಳಲಿದ್ದೇವೆ, ಜೈಲಿಗೆ ಹೋಗಲು ಸಿದ್ಧ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.

ಸರಕಾರ, ಮುಖ್ಯಮಂತ್ರಿ, ಸಚಿವರು ಮಾತಿಗೆ ತಪ್ಪಿದ್ದಾರೆ. ಅನಿವಾರ್ಯವಾಗಿ ಸರಕಾರಕ್ಕೆ ನಮ್ಮ ನೋವು ಹೇಳಿಕೊಳ್ಳಲು ಹೋರಾಟ ಅನಿವಾರ್ಯ. ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಹೋರಾಟ ನಡೆಸುವುದಾಗಿ ಶ್ರೀಕಂಠೇಗೌಡ ತಿಳಿಸಿದ್ದಾರೆ.

Comments are closed.