ಕರ್ನಾಟಕ

ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಬೆಳೆಸಿದರೆ ಒಳ್ಳೆಯದು?

Pinterest LinkedIn Tumblr


ಮನೆಯಲ್ಲಿ ಸುಖ ಜೀವನ ಸಾಕಾರವಾಗಬೇಕಾದರೆ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸಬೇಕು ಎನ್ನುವುದು ಆಸ್ತಿಕರ ನಂಬಿಕೆ. ಈ ಹಿನ್ನೆಲೆಯಲ್ಲಿ ಕೆಲವೊಂದು ವಾಸ್ತು ನಿಯಮಗಳನ್ನು ಇಲ್ಲಿ ನೀಡಲಾಗಿದೆ.

– ತುಳಸಿಯಂತಹ ಆರೋಗ್ಯ ಮತ್ತು ಆಧ್ಯಾತ್ಮ ಮೇಳೈಸಿರುವ ಗಿಡಗಳನ್ನು ಬೆಳೆಸಿ. ಕನಿಷ್ಠ ಒಂದು ತುಳಸಿ ಗಿಡವಾದರೂ ಈಶಾನ್ಯ ಭಾಗದಲ್ಲಿರಲಿ.

– ಕಿಟಕಿ ಬಾಗಿಲು ಯಾವಾಗಲೂ ಹೊರ ಭಾಗಕ್ಕೆ ತೆರೆಯುವಂತಿರಲಿ. ಲ್ಯಾಟ್ರೀನ್‌ ಸೀಟ್‌ ದಕ್ಷಿಣ ಅಥವಾ ಪಶ್ಚಿಮ ಗೋಡೆಗೆ ಹತ್ತಿ ಕೊಂಡಿರಲಿ.

– ಕೊಠಡಿಯ ದಕ್ಷಿಣ ದಿಕ್ಕಿನಲ್ಲಿ ಕ್ಯಾಶ್‌ ಬಾಕ್ಸ್‌ ಇಡಬೇಕು. ಅಲ್ಮೇರಾ ಇದ್ದರೆ ಅದರ ಬಾಗಿಲು ಉತ್ತರಕ್ಕೆ ತೆರೆದುಕೊಳ್ಳುವಂತಿರಬೇಕು.

ಪೀಠೋಪಕರಣಗಳು ಸಾಧ್ಯವಾದಷ್ಟು ಚೌಕ, ವೃತ್ತ ಅಥವಾ ಷಟ್ಭುಜಾಕೃತಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕು. ಉತ್ತರಗ ಮತ್ತು ಪೂರ್ವ ದಿಕ್ಕಿನಲ್ಲಿ ಚಿಕ್ಕ ಆಲಂಕಾರಿಕ ಗಿಡಗಳು, ಚಿಕ್ಕ ಪೊದೆ ಗಿಡಗಳು ಇರಲಿ. ಇವುಗಳ ಎತ್ತರ ಅರ್ಧ ಮೀಟರ್‌ನ್ನು ಮೀರದಿರಲಿ. ಈಶಾನ್ಯ ಭಾಗದಲ್ಲಿದ್ದರೆ ಯಾವಾಗಲೂ 1.5 ಮೀಟರ್‌ಗಿಂತ ಎತ್ತರವಾಗಬಾರದು. ಬೆಡ್‌ ರೂಂನಲ್ಲಿ ಗಿಡ ಅಥವಾ ನೀರಿನ ಅಂಶವಿರುವ ಯಾವುದೇ ವಸ್ತುವನ್ನು ಇಡಬಾರದು. ಅಲ್ಲಿ ಟಿವಿ ಸೆಟ್‌ ಕೂಡ ಇರಬಾರದು. ಇವುಗಳನ್ನು ಲೀವಿಂಗ್‌ ಅಥವಾ ಸ್ಟಡಿ ರೂಂನ ಆಗ್ನೇಯ ಮೂಲೆಯಲ್ಲಿ ಇಡಬೇಕು. ಆದರೆ ಈಶಾನ್ಯ ಅಥವಾ ನೈರುತ್ಯ ಮೂಲೆಯಲ್ಲಿ ಇರಲೇ ಬಾರದು.

Comments are closed.