ಕರ್ನಾಟಕ

ನಾನು ಯಾವುದೇ ಫೇಕ್‌ ಅಕೌಂಟ್‌ ಕ್ರಿಯೇಟ್ ಮಾಡು ಎಂದಿಲ್ಲ: ರಮ್ಯಾ ಸ್ಪಷ್ಟನೆ

Pinterest LinkedIn Tumblr


ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಫೇಕ್‌ ಅಕೌಂಟ್‌ ತೆರೆಯಿರಿ ಎಂದು ಕರೆ ನೀಡಿಲ್ಲ. ಅಂಥ ಹೇಳಿಕೆಗಳನ್ನು ನೀಡುವ ವ್ಯಕ್ತಿಯೂ ನಾನಲ್ಲ ಎಂದು ಕಾಂಗ್ರೆಸ್‌ ನಾಯಕಿ, ಚಿತ್ರ ನಟಿ ರಮ್ಯಾ ಈಗ ಸ್ಪಷ್ಟನೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯಾ ವಿವಾದ ಕುರಿತು ಸ್ಪಷ್ಟನೆ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ವಿಡಿಯೋದಲ್ಲಿ ನಾನು ಫೇಕ್‌ ಅಕೌಂಟ್‌ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಹೊರತು ಫೇಕ್‌ ಅಕೌಂಟ್‌ ಕ್ರಿಯೇಟ್‌ ಮಾಡಿ ಎಂದಿಲ್ಲ. ಹೀಗೆ ಹೇಳುವ ವ್ಯಕ್ತಿ ನಾನಲ್ಲ, ಕಾಂಗ್ರೆಸ್‌ನಲ್ಲಿ ಅಂಥ ಸಂಸ್ಕೃತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ನರೇಂದ್ರ ಮೋದಿ ಅವರು ನೀಡಿರುವ ಟಾಪ್‌ ಹೇಳಿಕೆಯನ್ನೇ ನಾನು ಟ್ವಿಟರ್‌ನಲ್ಲಿ ಹೇಳಿದ್ದೇನೆ. ಅವರು ಟಿ ಒ ಪಿ ಎಂದು ವಿಶ್ಲೇಷಿಸಿದರು. ನಾನು ಪಿ ಒ ಟಿ ಎಂದು ಅದನ್ನು ವಿಶ್ಲೇಷಿಸಿದ್ದೇನೆ ಎಂದು ಸಮಜಾಯಿಷಿ ನೀಡಿದರು.

ಇನ್ನು ಜಗ್ಗೇಶ್‌ ಅವರು ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಅವರು ತುಂಬಾ ದೊಡ್ಡವರು, ಅವರ ಬಗ್ಗೆ ಮಾತನಾಡುವುದಿಲ್ಲ ಎಂದಷ್ಟೇ ಹೇಳಿದರು.

ಮೋದಿ ಬೆಂಗಳೂರಿನಲ್ಲಿ ಭಾಷಣ ಮಾಡಿದ್ದಕ್ಕೆ ಟ್ವಿಟರ್‌ನಲ್ಲಿ ಸಂದೇಶ ನೀಡಿದ್ದ ವಿವಾದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್‌ ಅಕೌಂಟ್‌ ಕ್ರಿಯೇಟ್ ಮಾಡಿ ಎಂದು ಪಾಠ ಮಾಡುತ್ತಿದ್ದ ವಿಡಿಯೋ ಬಿಡುಗಡೆಯಾಗಿ ರಮ್ಯಾ ವಿವಾದದ ಸುಳಿಗೆ ಸಿಲುಕಿದ್ದರು.

Comments are closed.