
ಆನೇಕಲ್ : ಮದುಮಗ, ಮದುಮಗಳು ಶಿವ ಪಾರ್ವತಿಯಾಗಿ ಅವರನ್ನು ಆಶೀರ್ವಾದಿಸಲು ಮುಕ್ಕೋಟಿ ದೇವತೆಗಳು ಧರೆಗಿಳಿಯುವಂತಹ ಮದುವೆಯನ್ನು ನಾಟಕ, ಸಿನಿಮಾಗಳನ್ನು ನೋಡಿರುತ್ತೇವೆ, ಆದರೆ ಅದನ್ನೂ ನಾಚಿಸುವಂತಹ ಮದುವೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೊರವಲಯ ಬನ್ನೇರುಘಟ್ಟದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಮಾರ್ಡನ್ ಗಿರಿಜಾ ಕಲ್ಯಾಣ ನಡೆದಿದೆ. ವಧು, ವರರು ಸಾಕ್ಷಾತ್ ಶಿವ, ಪಾರ್ವತಿಯರ ವೇಷಭೂಷಣ ಧರಿಸಿ ಮದುವೆಯಾಗಿದ್ದಾರೆ ಇದಕ್ಕೆ ಕಾರಣ ಗಿರಿಜಾ ಕಲ್ಯಾಣ ಸಿನಿಮಾವಂತೆ.
ಬನ್ನೇರುಘಟ್ಟ ರಸ್ತೆಯ ಕಲ್ಕೇರೆ ಗಣಪತಿ ದೇವಾಲಯದ ಅರ್ಚಕ ವಸಂತ್ ಕುಮಾರ್ ಮಗ ಲಕ್ಷ್ಮೀಶ್ ನಿಗೆ ಗಿರಿಜಾ ಕಲ್ಯಾಣ ಚಿತ್ರದಲ್ಲಿ ಮದುವೆ ಮಾಡಿದಂತೆ ಕುಟುಂಬಸ್ಥರೆಲ್ಲ ದೇವಾನುದೇವತೆಗಳ ವೇಷಧರಿಸಿ ಮದುವೆ ಮಾಡಿಸಿದ್ದಾರೆ. ವಧು, ವರರನ್ನ ಬನ್ನೇರುಘಟ್ಟದ ಬೀದಿಗಳಲ್ಲಿ ಮೆರವಣಿಗೆ ಕೂಡ ಮಾಡಿಸಿದ್ದಾರೆ. ಈ ವಿಶೇಷ ಮದುವೆ ನೋಡುಗರಲ್ಲಿ ಬಹಳ ಕುತೂಹಲ ಮೂಡಿಸಿದೆ.
Comments are closed.