ರಾಷ್ಟ್ರೀಯ

ಮನ್‌ ಕಿ ಬಾತ್‌ನಲ್ಲಿ ಕರ್ನಾಟಕದ ಪದ್ಮಶ್ರೀ ವಿಜೇತೆ ಸೀತವ್ವ ಜೋಡಟ್ಟಿ ಗುಣಗಾನ

Pinterest LinkedIn Tumblr


ನವದೆಹಲಿ: ವರ್ಷದ ಮೊದಲ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟದ ಪದ್ಮಶ್ರೀ ಪ್ರಶಸ್ತಿ ವಿಜೇತೆ ಬೆಳಗಾವಿ ಜಿಲ್ಲೆಯ ಸೀತವ್ವ ದುಂಡಪ್ಪ ಜೋಡಟ್ಟಿ ಮತ್ತು ಮೈಸೂರಿನ ದರ್ಶನ್‌ ಪತ್ರ ಬರೆದ ಕುರಿತು ಪ್ರಸ್ತಾಪಿಸಿದರು.

ವಿಶೇಷ ಸಾಧನೆ ಮಾಡಿದ ಸಾಮಾನ್ಯರಿಗೆ ಪದ್ಮ ಪ್ರಶಸ್ತಿ ಲಭ್ಯವಾಗಿದೆ. ಪದ್ಮ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯೂ ಈಗ ಬದಲಾಗಿದೆ. ಮಹಿಳಾ ಸಬಲೀಕರಣಕ್ಕೆ ಹೋರಾಡಿದ ಸೀತವ್ವ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಇದೇ ಕಾರಣಕ್ಕಾಗಿ ಅವರ ಸಾಧನೆಗೆ ಶ್ರೇಷ್ಠ ಪ್ರಶಸ್ತಿ ದೊರಕಿದೆ ಎಂದು ಪ್ರಧಾನಿ ತಿಳಿಸಿದರು.

ಕೇಂದ್ರದ ಪ್ರಧಾನ ಮಂತ್ರಿ ಜನೌಷಧ ಯೋಜನೆ ಕುರಿತು ರಾಜ್ಯದ ಮೈಸೂರಿನ ದರ್ಶನ್‌ ಎಂಬಾತ ಪತ್ರ ಬರೆದಿರುವ ಕುರಿತು ಉಲ್ಲೇಖಿಸಿದ ಅವರು, ತನ್ನ ತಂದೆಯ ಚಿಕಿತ್ಸೆಯ ಔಷಧಗಳಿಗಾಗಿ ತಿಂಗಳಿಗೆ ಸುಮಾರು 6 ಸಾವಿರ ರೂ.ಗಳನ್ನು ಖರ್ಚು ಮಾಡುತ್ತಿದ್ದ ದರ್ಶನ್‌, ಪ್ರಧಾನಮಂತ್ರಿ ಜನೌಷಧ ಯೋಜನೆಯಿಂದಾಗಿ ಆತನ ಖರ್ಚಿನಲ್ಲಿ ಶೇ. 75ರಷ್ಟು ಕಡಿತ ಕಂಡಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆ ಜನರನ್ನು ತಲುಪಿ ಉತ್ತಮ ಆರೋಗ್ಯ ಪಡೆದು, ಜೀವನ ಸಾಗಿಸುವಂತಾಗಬಹುದು ಎಂದು ತಿಳಿಸಿದರು.

ಸೀತವ್ವ ದುಂಡಪ್ಪ ಜೋಡಟ್ಟಿ ಅವರ ಪರಿಚಯ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಸೀತವ್ವ ದುಂಡಪ್ಪ ಜೋಡಟ್ಟಿ (43) ಕೂಲಿ ಕೆಲಸ ಮಾಡಿಕೊಂಡು ನಂತರ ದೇವದಾಸಿ ಪದ್ಧತಿಗೆ ಆಹಾರವಾಗಿದ್ದವರು. ನಂತರ ಸಮಾಜದಲ್ಲಿ ಎದುರಾದ ಅವಮಾನ, ಶೋಷಣೆಯಿಂದ ನೊಂದು 1997ರಲ್ಲಿ ಜಿಲ್ಲೆಯ ದೇವದಾಸಿಯರೊಂದಿಗೆ ಒಟ್ಟುಗೂಡಿ ಮಹಿಳಾ ಅಭಿವೃದ್ಧಿ ಹಾಗೂ ಸಂರಕ್ಷಣಾ ಸಂಸ್ಥೆ (ಮಾಸ್)ಯನ್ನು ಘಟಪ್ರಭಾದಲ್ಲಿ ಸ್ಥಾಪಿಸಿ ದೇವದಾಸಿ ಪದ್ಧತಿ ನಿರ್ಮೂಲನೆಗೆ ಶ್ರಮಿಸುತ್ತಿದ್ದಾರೆ. ದೇವದಾಸಿ ಮತ್ತು ಬಾಲ್ಯವಿವಾಹ ಪದ್ಧತಿ ತಡೆಯುವುದು, ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವುದು, ಎಸ್​ಸಿ-ಎಸ್​ಟಿ ಬಾಲಕಿಯರಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೇರೇಪಣೆ ನೀಡುವುದು ಮುಂತಾದ ಕೆಲಸಗಳನ್ನು ಸಂಸ್ಥೆ ಮೂಲಕ ಮಾಡುತ್ತಿದ್ದಾರೆ.

Comments are closed.