ಕರಾವಳಿ

ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ :ಶ್ರೀ ಕ್ಷೇತ್ರ ಕಟೀಲಿನಲ್ಲೂ ಲಸಿಕೆ ವ್ಯವಸ್ಥೆ

Pinterest LinkedIn Tumblr

ಮಂಗಳೂರು, ಜನವರಿ.28:ದ.ಕನ್ನಡ ಜಿಲಾದ್ಯಂತ ಹಮ್ಮಿಕೊಂಡಿರುವ ದ.ಕ. ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ರವಿವಾರ ಬೆಳಿಗ್ಗೆ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಚಾಲನೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ವಹಿಸಿದ್ದರು. ಡಿಎಚ್ ಒ ಡಾ.ರಾಮಕೃಷ್ಣ ರಾವ್, ಡಿಎಂಒ ಡಾ.ಸವಿತಾ, ಆರ್ ಎಂಒ ಡಾ.ಜೆಸಿಂತಾ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಶೆಟ್ಟಿ, ನೋಡಲ್ ಅಧಿಕಾರಿ ಡಾ.ಸತೀಶ್ಚಂದ್ರ ಉಪಸ್ಥಿತರಿದ್ದರು.

ಕಟೀಲು ಶ್ರೀ ಕ್ಷೇತ್ರದಲ್ಲೂ ಪಲ್ಸ್ ಪೋಲಿಯೋ ಲಸಿಕೆ ವ್ಯವಸ್ಥೆ 

ಜಿಲ್ಲೆಯ ವಿವಿದೆಡೆಗಳಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ ತಮ್ಮ ತಮ್ಮ ಮಕ್ಕಳಿಗೆ ಲಸಿಕಿ ಹಾಕಿಸಿ ಕೊಂಡರು. ವಿಶೇಷವೆಂದರೆ ಕಟೀಲು ಶ್ರೀ ಕ್ಷೇತ್ರದ ಪ್ರಾಂಗಣದಲ್ಲಿ ಕೂಡ ಪ್ರತೀ ಸಂದರ್ಭದಲ್ಲಿಯೂ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇಂದು ಕೂಡ ಕಟೀಲು ಶ್ರೀ ಕ್ಷೇತ್ರದ ಪ್ರಾಂಗಣದಲ್ಲಿ ಕ್ಷೇತ್ರಕ್ಕೆ ಬಂದ ನೂರಾರು ಭಕ್ತಾಧಿಗಳು ತಮ್ಮ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಂಡರು.

Comments are closed.