ಮನೋರಂಜನೆ

ಬಿಗ್‌ಬಾಸ್‌ ಪಟ್ಟ ಮುಡಿಗೇರಿಸಿಕೊಂಡ ಚಂದನ್‌ ಶೆಟ್ಟಿ ! ದಿವಾಕರ್ ರನ್ನರ್ ಅಪ್-ಕೊನೆಯ ಗಳಿಗೆಯಲ್ಲಿ ನಿರಾಸೆಗೊಂಡ ಜೆಕೆ

Pinterest LinkedIn Tumblr

ಬೆಂಗಳೂರು: ಎಲ್ಲರ ನಿರೀಕ್ಷೆಯಂತೆ ಕನ್ನಡ ಬಿಗ್‌ಬಾಸ್‌ 5 ನೇ ಸೀಸನ್‌’ನ ವಿನ್ನರ್ ಆಗಿ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಹೊರ ಹೊಮ್ಮಿದ್ದಾರೆ.

ಈ ಬಾರಿಯ ಬಿಗ್‌ಬಾಸ್‌ ಪಟ್ಟ ಚಂದನ್ ಶೆಟ್ಟಿಯವರ ಮುಡಿಗೆ ಎಂದು ಬಿಗ್‌ಬಾಸ್‌ ವೀಕ್ಷಕರಲ್ಲಿ ಬಹುತೇಕರು ಹೇಳಿದಂತಾಗಿದ್ದು, ರನ್ನರ್ ಅಪ್ ದಿವಾಕರ್ ಅವರಿಗೆ ಹಾಗು ಅಂತಿಮ ಹಂತದಲ್ಲಿ ಹೊರಬಿದ್ದ ಜಯರಾಮ್ ಕಾರ್ತಿಕ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್‌ ಫಿಲಂ ಸಿಟಿಯಲ್ಲಿ ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ಚಂದನ್‌ ಶೆಟ್ಟಿಯನ್ನು ಸುದೀಪ್ ವಿನ್ನರ್ ಘೋಷಿಸಿದರು.

ಚಂದನ್ ಶೆಟ್ಟಿ ಕನ್ನಡದ ರ‍್ಯಾಪ್ ಸಾಂಗ್‌ಗಳನ್ನು ಹಾಡುವುದರಲ್ಲಿ ಎತ್ತಿದ ಕೈ. ಈ ಹಿಂದೆ ಮೂರೆ ಮೂರು ಪೆಗ್ಗಿಗೆ ಎಂಬ ಹಾಡಿನ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ಈಗಾಗಲೇ ಒಂದಿಷ್ಟು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಈಗಾಗಲೇ ಒಂದು ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದು ಇನ್ನೂ ಅದರ ಶೂಟಿಂಗ್‌ ಮುಗಿದಿಲ್ಲ.

ಬಿಗ್‌ಬಾಸ್‌ ಮನೆಯ ಆಟದಲ್ಲಿ ಈ ಬಾರಿ 17 ಸ್ಪರ್ಧಿಗಳು ಭಾಗವಹಿಸಿದ್ದರು. ಅಷ್ಟೂ ದಿನಗಳ ಟಾಸ್ಕ್ನಲ್ಲಿ ಎಲ್ಲಾ ಸ್ಪರ್ಧಿಗಳು ತೀವ್ರ ಪೈಪೋಟಿ ನಡೆಸಿದ್ದರು. ಆ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿದ ಚಂದನ್‌ಶೆಟ್ಟಿ ಅವರು ಅರ್ಧ ಕೋಟಿ ಹಾಗೂ ಟ್ರೋಪಿ ಗೆಲ್ಲುವ ಮೂಲಕ ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ.

ಬಿಗ್‌ಬಾಸ್‌ ರಿಯಾಲಿಟಿ ಶೋನ ಅಂತಿಮ ಸುತ್ತಿನಲ್ಲಿ ದಿವಾಕರ್‌, ಚಂದನ್‌ಶೆಟ್ಟಿ ಹಾಗು ಜಯಕಾರ್ತಿಕ್‌ ನಡುವೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಮೂವರಲ್ಲಿ ಜಯಕಾರ್ತಿಕ್‌ ಮೊದಲನೆಯವರಾಗಿ ಹೊರಗೆ ಬಂದರು. ಕಡೆಗೆ ಚಂದನ್‌ ಮತ್ತು ದಿವಾಕರ್‌ ನಡುವೆ ಹಣಾಹಣಿ ಏರ್ಪಟ್ಟಿತ್ತು. ಕೊನೆಯ ದಿನಗಳಲ್ಲಿ ದಿವಾಕರ್‌ ಬಗ್ಗೆ ಎಲ್ಲೆಡೆ ಮೆಚ್ಚುಗೆ ಮಾತುಗಳೂ ಕೇಳಿಬಂದಿದ್ದವು. ಈಗ ಚಂದನ್‌ಶೆಟ್ಟಿ ಬಿಗ್‌ಬಾಸ್‌ ಎನಿಸಿಕೊಂಡಿದ್ದಾರೆ.

ದಿವಾಕರ್‌ ರನ್ನರ್‌ಅಪ್‌ ಆಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಆಶಿತಾ, ಚಂದನ್‌ ಶೆಟ್ಟಿ, ಸಿಹಿಕಹಿ ಚಂದ್ರು, ದಿವಾಕರ್‌, ಜಗನ್‌, ಜಯ ಶ್ರೀನಿವಾಸನ್‌, ಕಾರ್ತಿಕ್‌ ಜಯರಾಮ್‌, ಕೃಷಿ ತಪಂಡ, ಮೇಘ, ನಿವೇದಿತಾ ಗೌಡ, ರಿಯಾಜ್‌, ಸಮೀರ್‌ ಆಚಾರ್ಯ, ಶ್ರುತಿ ಪ್ರಕಾಶ್‌, ಸುಮಾ, ತೇಜಸ್ವಿನಿ ಸ್ಪರ್ಧಿಗಳಾಗಿದ್ದರು.

Comments are closed.