ಕರ್ನಾಟಕ

ಬಾಹುಬಲಿ ಅಟ್ಟಣಿಗೆಗೆ ಲಿಫ್ಟ್​ ಅಳವಡಿಸಲು ಪುರಾತತ್ವ ಇಲಾಖೆ ವಿರೋಧ

Pinterest LinkedIn Tumblr


ಹಾಸನ: ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಬಾಹುಬಲಿ ದರ್ಶನಕ್ಕೆ ಅಳವಡಿಸಿರುವ ಅಟ್ಟಣಿಗೆಗೆ ಲಿಫ್ಟ್​ ಅಳವಡಿಸಲು ಪುರಾತತ್ವ ಇಲಾಖೆ ವಿರೋಧ ವ್ಯಕ್ತಪಡಿಸಿದ್ದು, ಲಿಫ್ಟ್​ ನಿಂದ ಕಂಪನ ಉಂಟಾಗಿ ಮೂರ್ತಿಗೆ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಮಸ್ತಕಾಭಿಷೇಕ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಆತಂಕ ಹೊರಹಾಕಿದರು. ಪ್ರತಿಕ್ರಿಯಿಸಿದ ಸಚಿವ ಎ.ಮಂಜು, ಪರ್ಯಾಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗೊಮ್ಮಟ ನಗರದ 5 ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರ ಸೇವೆ ಉಚಿತವಾಗಿ ಒದಗಿಸುವಂತೆ ಜಿಲ್ಲಾ ಕೆಎಸ್​ಆರ್​ಟಿಸಿ ಡಿಸಿ ಯಶ್ವಂತ್​ಗೆ, ಶ್ರವಣಬೆಳಗೊಳದ ವಿಂಧ್ಯಾಗಿರಿ, ಚಂದ್ರಗಿರಿ ಬೆಟ್ಟದಲ್ಲಿ ಜೇನು, ಚಿರತೆ ಹಾವಳಿಯಿಂದ ಭಕ್ತರಿಗೆ ತೊಂದರೆಯಾಗಂತೆ ಕ್ರಮವಹಿಸುವಂತೆ ಡಿಎಫ್ಒ ಮಂಜುನಾಥ್​ಗೆ ಹಾಗೂ ಜ.30ರೊಳಗೆ ಎಲ್ಲ ಕಾಮಗಾರಿ ಮುಗಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Comments are closed.