ಕರ್ನಾಟಕ

ಅಮಿತ್ ಶಾ ವಿರುದ್ಧ ಗುಡುಗು; ಸಿದ್ದರಾಮಯ್ಯ-ಸದಾನಂದ ಗೌಡ ಮಧ್ಯೆ ಟ್ವೀಟ್ ವಾರ್

Pinterest LinkedIn Tumblr

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ನೇತಾರ ಸದಾನಂದ ಗೌಡರ ಮಧ್ಯೆ ಟ್ವಿಟರ್‍‌‍ನಲ್ಲಿ ಟ್ವೀಟ್ ಜಗಳ ನಡೆದಿದೆ. ಗುರುವಾರ ಮೈಸೂರಿನಲ್ಲಿ ಸಂಪನ್ನಗೊಂಡ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಭ್ರಷ್ಟಾಚಾರ ಎಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಎಂದರೆ ಭ್ರಷ್ಟಾಚಾರ. ಆ ಎರಡೂ ವಿಚಾರಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು.

ಅಮಿತ್ ಶಾ ಅವರ ಈ ಹೇಳಿಕೆಗೆ ಟ್ವಿಟರ್‍‍ನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕರ್ನಾಟಕ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಓರ್ವ ಮಾಜಿ ಜೈಲು ಹಕ್ಕಿಯನ್ನು ಆಯ್ಕೆ ಮಾಡಿರುವ ಮಾಜಿ ಜೈಲು ಹಕ್ಕಿಯೊಬ್ಬರು ಈ ರೀತಿ ಹೇಳುತ್ತಿದ್ದಾರೆ. ನನ್ನ ಮತ್ತು ನನ್ನ ಸರ್ಕಾರದ ವಿರುದ್ಧವಿರುವ ಭ್ರಷ್ಟಾಚಾರದ ಲೆಕ್ಕವನ್ನು ಕೊಡಲು ಇವರಿಂದ ಸಾಧ್ಯವೆ?. ಸುಳ್ಳುಗಳನ್ನು ಹೇಳುವುದರಿಂದ ಯಾವುದೇ ಪ್ರಯೋಜನವಾಗಲ್ಲ, ಜನರು ಇದನ್ನೆಲ್ಲಾ ನಂಬುವುದಿಲ್ಲ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಕಾಂಗ್ರೆಸ್ (ಐ) ರೂಪಿಸಿದ್ದೇ ಮಾಜಿ ಜೈಲು ಹಕ್ಕಿ, ಅವರು ದೇಶದ ಮಾಜಿ ಪ್ರಧಾನಿಯಾಗಿದ್ದರು. ಅವರ ಮಗ ಮಾಜಿ ಪ್ರಧಾನಿ ಬೋಫೋರ್ಸ್ ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿ ಶಾಶ್ವತವಾಗಿ ಜೈಲು ಹಕ್ಕಿಯಾಗಿರಬೇಕಾಗಿತ್ತು. ಆದರೆ ದುರದೃಷ್ಟವಶಾತ್ ನಿಮ್ಮ ಪಕ್ಷ ಪ್ರಾಯೋಜಿತ ಉಗ್ರವಾದವೇ ಅವರನ್ನು ಹತ್ಯೆ ಮಾಡಿತು. ಇದಕ್ಕಿಂತ ಇನ್ನೇನಾದರೂ ಪಟ್ಟಿ ಬೇಕಾ?

ಇದಾದ ನಂತರ ಸದಾನಂದ ಗೌಡರನ್ನು ಕೆಣಕಿದ ಸಿಎಂ, ಅಮಿತ್ ಶಹಾ ಅವರ ಮಗನ ಆಸ್ತಿ ಮೂರು ವರ್ಷಗಳ ಅವಧಿಯಲ್ಲಿ 16000 ಪಟ್ಟು ಹೆಚ್ಚಾಗಿದ್ದು ಹೇಗೆ ಎನ್ನುವುದನ್ನು ಪಕ್ಷದ ಅಧ್ಯಕ್ಷರ ಸಮರ್ಥನೆಗೆ ಇಳಿದಿರುವ ಕೇಂದ್ರ ಅಂಕಿ ಅಂಶ (ಸಾಂಖ್ಯಿಕ) ಸಚಿವ ಸದಾನಂದ ಗೌಡರು ಉತ್ತರಿಸುವಿರಾ @DVSBJP

ರೈಲ್ವೆ ಖಾತೆಯಿಂದ, ಕಾನೂನು ಖಾತೆ, ಕಾನೂನು ಖಾತೆಯಿಂದ ಸಾಂಖ್ಯಿಕ ಖಾತೆ. ಇದು ನಿಮ್ಮ ಸಾಧನೆಗೆ ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷರು ನೀಡಿದ ಗೌರವ.‌ ಅಮಿತ್ ಶಹಾ ಬೆಂಬಲಿಸದಿದ್ದರೆ ಮುಂದೇನೋ? ಎಂದು ಪ್ರಶ್ನಿಸಿದ್ದಾರೆ.

ಅಮಿತ್ ಶಹಾ ಅವರ ಮಗನ ಆಸ್ತಿ ಮೂರು ವರ್ಷಗಳ ಅವಧಿಯಲ್ಲಿ 16000 ಪಟ್ಟು ಹೆಚ್ಚಾಗಿದ್ದು ಹೇಗೆ ಎನ್ನುವುದನ್ನು ಪಕ್ಷದ ಅಧ್ಯಕ್ಷರ ಸಮರ್ಥನೆಗೆ ಇಳಿದಿರುವ ಕೇಂದ್ರ ಅಂಕಿ ಅಂಶ (ಸಾಂಖ್ಯಿಕ) ಸಚಿವ ಸದಾನಂದ ಗೌಡರು ಉತ್ತರಿಸುವಿರಾ @DVSBJP

ರೈಲ್ವೆ ಖಾತೆಯಿಂದ, ಕಾನೂನು ಖಾತೆ, ಕಾನೂನು ಖಾತೆಯಿಂದ ಸಾಂಖ್ಯಿಕ ಖಾತೆ. ಇದು ನಿಮ್ಮ ಸಾಧನೆಗೆ ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷರು ನೀಡಿದ ಗೌರವ.‌ ಅಮಿತ್ ಶಹಾ ಬೆಂಬಲಿಸದಿದ್ದರೆ ಮುಂದೇನೋ?

ಅನೇಕ ಸಲ ರಾಜ್ಯದ ಆಯವ್ಯಯವನ್ನು ಮಂಡಿಸಿರುವ ನಿಮಗೆ ವಾರ್ಷಿಕ ವಹಿವಾಟಿಗೂ ,ವಾರ್ಷಿಕ ನಿವ್ವಳ ಲಾಭಕ್ಕೂ ಇರುವ ವ್ಯತ್ಯಾಸ ಗೊತ್ತಿದೆ ಅಂದುಕೊಂಡಿದ್ದೆ ನಿಮ್ಮ ಚೇಲಗಳೇ ನಿಮಗೆ ಇಂಟೆಲಿಜೆನ್ಸ್ ಬೇರೆ ಇಲಾಖೆಯಲ್ಲ. ಹಾಗಾಗಿ ನಿಮಗಿರುವ ಅಲ್ಪ ಮಾಹಿತಿಯಿಂದ ಈ ಹೇಳಿಕೆ @siddaramaiah

ಅನೇಕ ಸಲ ರಾಜ್ಯದ ಆಯವ್ಯಯವನ್ನು ಮಂಡಿಸಿರುವ ನಿಮಗೆ ವಾರ್ಷಿಕ ವಹಿವಾಟಿಗೂ ,ವಾರ್ಷಿಕ ನಿವ್ವಳ ಲಾಭಕ್ಕೂ ಇರುವ ವ್ಯತ್ಯಾಸ ಗೊತ್ತಿದೆ ಅಂದುಕೊಂಡಿದ್ದೆ ನಿಮ್ಮ ಚೇಲಗಳೇ ನಿಮಗೆ ಇಂಟೆಲಿಜೆನ್ಸ್ ಬೇರೆ ಇಲಾಖೆಯಲ್ಲ. ಹಾಗಾಗಿ ನಿಮಗಿರುವ ಅಲ್ಪ ಮಾಹಿತಿಯಿಂದ ಈ ಹೇಳಿಕೆ @siddaramaiah

Comments are closed.