
ಮೈಸೂರು: ವಿವಿಧ ಸಂಘಟನೆಗಳು ಜ.25ರಂದು ಕರ್ನಾಟಕ ಬಂದ್ಗೆ ಕರೆ ನೀಡಿರುವುದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಇಲ್ಲಿ ಮಾತನಾಡಿದ ಅವರು, ಮಹದಾಯಿಗೂ ಮೈಸೂರು ಭಾಗಕ್ಕೂ ಏನು ಸಂಬಂಧ? ಇದೆಲ್ಲ ಸಿದ್ದರಾಮಯ್ಯನಡೆಸುತ್ತಿರುವ ಬಂದ್ ಎಂದರು. ಸಿಎಂ ತಾವಾಗಿಯೇ ಬಸ್ ನಿಲ್ಲಿಸಿ ಕಿತಾಪತಿ ನಡೆಸುತ್ತಿದ್ದಾರೆ. ಅಂದು ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆ ನಡೆದೇ ನಡೆಯುತ್ತದೆ ಎಂದರು.
ಬಿಜೆಪಿ ಬೆಂಬಲ ಮಹದಾಯಿ ಹೋರಾಟಕ್ಕಿದೆ. ಆದರೆ, ಈ ಬಂದ್ಗೆ ಅಲ್ಲ. ನಿಜವಾಗಿಯೂ ಹೋರಾಟದ ಅನಿವಾರ್ಯ ಇರೋದು ಕಾಂಗ್ರೆಸ್ ವಿರುದ್ಧ. ನೀರು ಕೊಡುತ್ತೇವೆಂದು ಗೋವಾ ಸಿಎಂ ಹೇಳಿದ್ದಾರೆ. ಆದರೆ, ಅದಕ್ಕೆ ಅಲ್ಲಿನ ಕಾಂಗ್ರೆಸ್ ವಿರೋಧ ಪಡಿಸುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಯಾಕೆ ಪ್ರತಿಭಟನೆ ಮಾಡುತ್ತಿಲ್ಲ ಎಂದು ಬಿಎಸ್ವೈ ಪ್ರಶ್ನಿಸಿದರು.
ಬಂದ್ ಹಿಂದೆ ಸಿಎಂ ಮಿದುಳು ಕೆಲಸ ಮಾಡುತ್ತಿದೆ: ಶೆಟ್ಟರ್
ಹುಬ್ಬಳ್ಳಿ: ಜ.25 ಹಾಗೂ ಫೆ.4ರ ಬಂದ್ ವಿಚಾರವಾಗಿ ಇಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಮಿದುಳು ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ನ ಕುತಂತ್ರ ರಾಜಕೀಯದ ದ್ಯೋತಕ ಎಂದರು.
ಫೆ. 4ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಬಂದ್ಗೆ ಕರೆ ನೀಡಿರುವುದು ಸರಿಯಲ್ಲ. ಮಹದಾಯಿ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೌನ ಯಾಕೆ ವಹಿಸಿದ್ದಾರೆ? ಅವರು ತಮ್ಮ ನಿಲುವು ತಿಳಿಸಲಿ ಎಂದ ಅವರು, ನಾಳೆ ಸುದ್ದಿಗೋಷ್ಠಿಯಲ್ಲಿ ಮಲೇಷ್ಯಾ ಮರಳು ಗೋಲ್ಮಾಲ್ ಬಹಿರಂಗ ಮಾಡುತ್ತೇನೆ ಎಂದರು.
Comments are closed.