Uncategorized

33 ಗಂಟೆ ನಿಂತುಕೊಂಡೇ ಪ್ರಯಾಣ ಮಾಡಿಸಿದ ರೈಲ್ವೆ ಇಲಾಖೆಗೆ 37 ಸಾವಿರ ರೂ. ದಂಡ

Pinterest LinkedIn Tumblr

ಮೈಸೂರು: ಟಿಕೆಟ್ ಕಾಯ್ದಿರಿಸಿದ್ದರೂ ಸೀಟ್ ಸಿಗದೆ ಮಧ್ಯಪ್ರದೇಶದಿಂದ 33 ಗಂಟೆಗಳ ಕಾಲ ಮೈಸೂರಿನ ಕುಟುಂಬವೊಂದು ನಿಂತುಕೊಂಡೇ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಗೆ 37 ಸಾವಿರ ರೂ. ದಂಡವನ್ನು ಗ್ರಾಹಕರ ನ್ಯಾಯಾಲಯ ವಿಧಿಸಿದೆ.

ಮೈಸೂರಿನ ಸಿದ್ಧಾರ್ಥ ಬಡಾವಣೆ ನಿವಾಸಿ ವಿಜೇಶ್ ಕುಟುಂಬ ಜೈಪುರ್- ಮೈಸೂರು ಎಕ್ಸ್ ಪ್ರೆಸ್​ನಲ್ಲಿ ಮಧ್ಯಪ್ರದೇಶದಿಂದ ಮೈಸೂರುವರೆಗೆ 1,950 ಕಿ.ಮೀ. ನಿಂತುಕೊಂಡೇ ಪ್ರಯಾಣ ಮಾಡಿದ್ದಾರೆ. ರೈಲ್ವೆ ಇಲಾಖೆ ಮೇಲೆ ಕೋಪಗೊಂಡ ವಿಜೇಶ್ ಕುಟುಂಬ ಈ ಬಗ್ಗೆ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿತ್ತು.

ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ರೈಲ್ವೆ ಇಲಾಖೆಗೆ 37 ಸಾವಿರ ರೂ. ದಂಡ ವಿಧಿಸಿದೆ. ದಂಡದ ಹಣವನ್ನು ವಿಜೇಶ್ ಕುಟುಂಬಕ್ಕೆ ಪರಿಹಾರದ ರೂಪದಲ್ಲಿ ನೀಡಲು ಸೂಚಿಸಿದೆ.

Comments are closed.