ಕರ್ನಾಟಕ

ಅವಾಚ್ಯ ಶಬ್ದದಿಂದ ಬೈದಿದ್ದಕ್ಕೆ ಅಣ್ಣನನ್ನೇ ಕೊಂದ ತಮ್ಮ

Pinterest LinkedIn Tumblr

ಬೆಳಗಾವಿ: ಅವಾಚ್ಯ ಶಬ್ದದಿಂದ ಬೈದ ಕಾರಣಕ್ಕೆ ತಮ್ಮ ಅಣ್ಣನನ್ನೇ ಕೊಲೆ ಮಾಡಿದ್ದಾನೆ. ಇಲ್ಲಿನಿ ರಾಮತೀರ್ಥ ನಗರದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಊಟ ಮಾಡುತ್ತ ಅಣ್ಣ ಲೋಕೇಶ್​ ಸಾಣಿಕೊಪ್ಪ ಹಾಗೂ ತಮ್ಮ ಸಂತೋಷ್​ ಟಿ, ವಿ ನೋಡುತ್ತಿದ್ದಾರೆ. ಲೋಕೇಶ್​ ಸಂತೋಷ್​ಗೆ ಚಾನೆಲ್​ ಬದಲಿಸುವಂತೆ ಹೇಳಿದ್ದಾರೆ ಆದರೆ ಇದಕ್ಕೆ ಅವರು ನಿರಾಕರಿಸಿದ್ದಾರೆ. ಈ ವೇಳೆ ಅವಾಚ್ಯ ಪದ ಬಳಸಿ ಲೋಕೇಶ್​ ತಮ್ಮನನ್ನು ಬೈದಿದ್ದಾರೆ. ಈ ವಾಗ್ವಾದ ವಿಕೋಪಕ್ಕೆ ತಿರುಗಿದೆ.

ತಾಯಿಯ ದುಡ್ಡಿನಲ್ಲಿ ತಿಂದು ತಿರುಗಾಡುತಿಯಾ,ಒಂದು ಉದ್ಯೋಗ ಮಾಡಲಿಕ್ಕೆ ಆಗುವುದಿಲ್ಲವಾ ಎಂದು ಲೋಕೇಶ್​ಬೈದಿದ್ದಾರೆ. ಇದನ್ನು ಸಹಿಸದ ಸಂತೋಷ್​ ಖಾರ ಕುಟ್ಟುವ ಕಲ್ಲಿನಿಂದ ಅಣ್ಣನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಅಣ್ಣ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ಆರೋಪಿ ಸಂತೋಷ್​​ನನ್ನು ಪೊಲೀಸರು ಬಂಧಿಸಿದ್ದು, ಮಾಳಮಾರುತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.