ಕರ್ನಾಟಕ

ಅಮಿತ್‌ ಶಾ ಕಾಲ್ಗುಣದಿಂದ ಚುನಾವಣೆಯಲ್ಲಿ 150 ಸೀಟು ಗೆಲ್ಲುವ ವಿಶ್ವಾಸ: ಬಿಎಸ್‌ವೈ

Pinterest LinkedIn Tumblr


ಚಿತ್ರದುರ್ಗ: ಅಮಿಶ್ ಷಾ ಅವರ ಕಾಲ್ಗುಣ ಮತ್ತು ತಂತ್ರದಿಂದ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಹೊಳಲ್ಕೆರೆಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ಮಾತನಾಡಿದರು.

ರಾಹುಲ್ ಗಾಂಧಿಯವರು ಅನಿವಾಸಿ ಭಾರತೀಯರ ಕುರಿತು ಹಾಸ್ಯಾಸ್ಪದ ಮಾತನಾಡಿದ್ದಾರೆ,

ವಿದೇಶಗಳಿಗೆ ತೆರಳಿ ಪ್ರಧಾನಿ ಮೋದಿ ಹಾಗೂ ದೇಶದ ಬಗ್ಗೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಅಪಮಾನ ಮಾಡಿದ್ದಾರೆ ಎಂದರು.

ಭಾರತ ಕಾಂಗ್ರೆಸ್‌ ಮುಕ್ತವಾಗಬೇಕಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತವಾಗಬೇಕು, ಇದಕ್ಕಾಗಿ ನಮ್ಮ ಯುವ ಕಾರ್ಯಕರ್ತರು ಬೈಕ್ ಗಳ ಮೂಲಕ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿದೆ ಎಂದರು.

ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಲೂಟಿ ಮಾಡುತ್ತಿದೆ. ಹಗಲು ದರೋಡೆ ನಡೆಯುತ್ತಿದೆ. ಸಿದ್ದರಾಮಯ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಯಡಿಯೂರಪ್ಪ ಗುಡುಗಿದರು.

ರೈತರಿಗೆ ಬೇಕಾದ ನೀರಾವರಿ ಯೋಜನೆಗಳನ್ನ ಕಾರ್ಯಗತಗೊಳಿಸುತ್ತೇನೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಭಾಗದ ಕಾಡುಗೊಲ್ಲರನ್ನ ಎಸ್ಟಿ ಮೀಸಲಾತಿಗೆ ಸೇರಿಸಲಾಗುವುದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಡಿದೆ, ಮಹಿಳೆಯರು ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ, ಇನ್ನು ನಾಲ್ಕೇ ತಿಂಗಳಲ್ಲಿ ರಾಜ್ಯದಿಂದ ಕಾಂಗ್ರೆಸ್ ತೊಲಗಿಸಿ ಅಮಿತ್ ಷಾ ಅವರ ಆಸೆಯನ್ನು ಈಡೇಸುತ್ತೇವೆ ಯಡಿಯೂರಪ್ಪ ಹೇಳಿದರು.

Comments are closed.