
ಶಿವಮೊಗ್ಗ:ಬೊಮ್ಮನಕಟ್ಟೆ ಬಡಾವಣೆಯಲ್ಲಿ ಸೋಮವಾರ ರಾತ್ರಿ 10 ವರ್ಷ ಪ್ರಾಯದ ಬಾಲಕಿಯನ್ನು ಎಳೆದೊಯ್ಯುತ್ತಿದ್ದ ಕಾಮುಕ ಯುವಕನೊಬ್ಬನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಉಡುಪಿ ಮೂಲದ ಜಾಕೀರ್ ಎಂಬಾತ ಥಳಿತಕ್ಕೊಳಗಾಗಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು, ಈತ 4 ನೇ ತರಗತಿಯ ಬಾಲಕಿಗೆ 3 ದಿನಗಳಿಂದ ಕಿರುಕುಳ ನೀಡುತ್ತಿದ್ದ. ಅಟ್ಟಹಾಸ ಮೆರೆತ ಜಾಕೀರ್ ಬಾಲಕಿಯನ್ನು ಎಳೆದೊಯ್ಯುತ್ತಿದ್ದ ವೇಳೆ ಸಾರ್ವಜನಿಕರಿಂದ ಗೂಸಾ ತಿಂದಿದ್ದಾನೆ.
ಸಂತ್ರಸ್ತ ಬಾಲಕಿಯ ತಂದೆಯನ್ನು ಕಳೆದುಕೊಂಡಿದ್ದು ತಾಯಿ ಅಂಗಡಿಯೊಂದನ್ನು ನಡೆಸುತ್ತಿದ್ದು ಇಬ್ಬರೆ ಇದ್ದ ವೇಳೆ ಕೃತ್ಯ ನಡೆಸಲಾಗಿದೆ.
ಪೋಕ್ಸೋ ಕಾಯಿದೆ ಅಡಿ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
– ಉದಯವಾಣಿ
Comments are closed.