ಮುಂಬೈ

ಇನ್ನು ವಾಟ್ಸಾಪ್ ಮೂಲಕ ಬಾಳಸಂಗಾತಿ ಆಯ್ಕೆ ಮಾಡಿಕೊಳ್ಳಿ

Pinterest LinkedIn Tumblr


ಮುಂಬಯಿ: ನೀವು ಅವಿವಾಹಿತರೇ, ಮದುವೆಯಾಗಬೇಕು ಎಂದಿದ್ದೀರಾ? ಹಾಗಿದ್ದರೆ ನಿಮಗೆ ಸೂಕ್ತ ಎನ್ನಿಸುವ ಜೀವನ ಸಂಗಾತಿಯನ್ನು ಇನ್ನು ಮುಂದೆ ವಾಟ್ಸಾಪ್ ಗ್ರೂಪ್ ಮೂಲಕ ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಿದೆ ಮುಂಬಯಿ ನಗರದ ಅಂಧಶ್ರದ್ಧ ನಿರ್ಮೂಲನಾ ಸಮಿತಿ.

ಜಾತಿ, ಧರ್ಮ, ಸಂಪ್ರದಾಯಕ್ಕೆ ಅತೀತವಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವವರು ತಮ್ಮ ವಾಟ್ಸಾಪ್ ಗ್ರೂಪ್‌ನಲ್ಲಿ ಸೇರಬಹುದು ಎಂದು ಆ ಸಮಿತಿ ಪ್ರಕಟಿಸಿದೆ. ಹಣ ಸಲ್ಲಿಸಿ ವಿವಾಹ ವೆಬ್‌ಸೈಟ್‌ಗಳಲ್ಲಿ ಹೆಸರು ನಮೂದಿಸಿಕೊಂಡು ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಯುವತಿ, ಯುವಕರು ಸಂಪ್ರದಾಯಕ್ಕೆ ಗುಡ್ ಬೈ ಹೇಳಿ ಆಧುನಿಕ ಪದ್ಧತಿಯಲ್ಲಿ ವಾಟ್ಸಾಪ್ ಗ್ರೂಪ್ ಮೂಲಕ ನಿಮಗೆ ಇಷ್ಟವಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ ಎಂದಿದೆ ಸಮಿತಿ.

ನಿಮ್ಮ ಬಾಳ ಸಂಗಾತಿ ಹೇಗಿರಬೇಕು? ಎಂತಹ ಗುಣಲಕ್ಷಣಗಳು ಇರಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಈ ವಿವಾಹ ಗ್ರೂಪ್ ಅಡ್ಮಿನ್ ಪ್ರತಿನಿತ್ಯ ಒಂದು ಪ್ರಶ್ನೆಯನ್ನು ಕಳುಹಿಸಿ ಗ್ರೂಪ್ ಸದಸ್ಯರಿಂದ ಉತ್ತರ ಬಯಸುತ್ತಾನೆ. ಒಟ್ಟು 45 ದಿನಗಳ ಕಾಲ ಪ್ರತಿನಿತ್ಯ ಒಂದು ಪ್ರಶ್ನೆ ಕೇಳಲಾಗುತ್ತದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಉತ್ತರಿಸಲೇಬೇಕು. 50 ದಿನಗಳ ಕಾಲ ಮಾತ್ರ ಈ ಗ್ರೂಪ್ ಚಾಲ್ತಿಯಲ್ಲಿರುತ್ತದೆ.

18 ವರ್ಷಕ್ಕಿಂತಲೂ ಮೇಲ್ಪಟ್ಟವರು ಜಾತಿ, ಧರ್ಮ, ಭಾಷೆ, ಪ್ರದೇಶಕ್ಕೆ ಅತೀತವಾಗಿ ಈ ವಿವಾಹ ವಾಟ್ಸಾಪ್ ಗ್ರೂಪ್‌ನಲ್ಲಿ ಸೇರಬಹುದು ಎಂದಿದೆ ಸಮಿತಿ. ಕಳೆದ ಕೆಲ ವರ್ಷಗಳಿಂದ ಈ ಸಮಿತಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮಕ್ಕೂ ಅಡಿಯಿಟ್ಟಿದ್ದು ವಾಟ್ಸಾಪ್ ಗ್ರೂಪ್ ಸೃಷ್ಟಿಸಿದೆ.

Comments are closed.