
ಬೆಂಗಳೂರು: ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಬರೆದಿದ್ದು ಮಹದಾಯಿ ನದಿ ನೀರಿನ ಕುರಿತಾದ ಪತ್ರವಲ್ಲ, ಲವ್ ಲೆಟರ್ ಎಂದು ಸಚಿವ ಎಚ್. ಆಂಜನೇಯ ಲೇವಡಿ ಮಾಡಿದ್ದಾರೆ.
ಮಹದಾಯಿ ನದಿ ನೀರಿನ ಸಮಸ್ಯೆ ಬಗ್ಗೆ ಗೋವಾ ಸಿಎಂ ಪರಿಕ್ಕರ್, ಕರ್ನಾಟಕ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆಯಬೇಕಿತ್ತು. ಅದು ಬಿಟ್ಟು ಯಡಿಯೂರಪ್ಪನವರಿಗೆ ಯಾಕೆ ಬರೆದರು? ಇದು ಅವರಿಬ್ಬರ ನಡುವಿನ ಲವ್ ಲೆಟರ್ ಎಂದು ಸಚಿವ ಆಂಜನೇಯ ಟೀಕಿಸಿದ್ದಾರೆ.
ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಸಿಎಂಗಳು ಜತೆಯಾಗಿ ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಚರ್ಚಿಸಿ ತಮ್ಮ ರಾಜ್ಯಕ್ಕೆ ಎಷ್ಟು ನೀರು ಬಿಡಬೇಕು ಎಂಬುದನ್ನು ತೀರ್ಮಾನಿಸಬೇಕು. ಇದರ ಹೊರತು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.
Comments are closed.