ಕರ್ನಾಟಕ

ಅನಂತ್ ಕುಮಾರ್‌ ಹೆಗಡೆ, ಭಾರತಾಂಬೆಯ ಕುರಿತು ಅವಹೇಳನ: ಅಗ್ನಿ ಶ್ರೀಧರ್ ವಿರುದ್ಧ ದೂರು

Pinterest LinkedIn Tumblr


ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಮತ್ತು ಭಾರತಾಂಬೆಯ ಕುರಿತು ಅವಹೇಳನಕಾರಿ ಕವನ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡರು ಪತ್ರಕರ್ತ ಅಗ್ನಿ ಶ್ರೀಧರ್‌ ವಿರುದ್ಧ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

‘ಅಗ್ನಿ ಅಸ್ತ್ರ ಡಾಟ್‌ ಕಾಮ್‌’ ಮತ್ತು ಅಗ್ನಿ ಯು ಟ್ಯೂಬ್‌ ಚಾನಲ್‌ನಲ್ಲಿ ರಾಜಕೀಯವಾಗಿ ಯಾರನ್ನೋ ಟೀಕೆ ಮಾಡುವ ಸಲುವಾಗಿ ಕವನವೊಂದನ್ನು ಪೋಸ್ಟ್‌ ಮಾಡಲಾಗಿದೆ. ಹಲವಾರು ವಿವಾದಾತ್ಮಕ ಪೋಸ್ಟ್‌ಗಳನ್ನು ನಿರಂತರವಾಗಿ ಮಾಡುತ್ತಿರುವ ಅಗ್ನಿ ಚಾನಲ್‌ ಮತ್ತು ವೆಬ್‌ ಪೋರ್ಟಲನ್ನು ಬಂದ್‌ ಮಾಡಿಸಬೇಕು ಹಾಗೂ ಶ್ರೀಧರ್‌ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್‌, ವರದರಾಜು ಎಂ.ಸಿ, ಶಿವಕುಮಾರ್‌ ಆರಾಧ್ಯ ಅವರು ದೂರು ನೀಡಿದ್ದಾರೆ.

Comments are closed.