ಕರ್ನಾಟಕ

ಸನ್ನಿ ನೈಟ್ಸ್‌: ಪೊಲೀಸ್‌ಗೆ ಕೋರ್ಟ್‌ ತರಾಟೆ

Pinterest LinkedIn Tumblr


ಬೆಂಗಳೂರು: ಸನ್ನಿ ನೈಟ್ಸ್ ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ಅನುಮತಿ ಅನುಮತಿ ನಿರಾಕರಣೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಪೋಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ. ಬೇರೆಯವರಿಗೆ ಅನುಮತಿ ನೀಡಿ ಇವರಿಗೆ ಏಕೆ ಕೊಟ್ಟಿಲ್ಲ , ಯಾರಿಗೆಲ್ಲ ಅನುಮತಿ ಕೊಟ್ಟಿದ್ದೀರಿ ಎಂದು ಕೋರ್ಟ್‌ ಕೇಳಿದೆ.

ಬೆಂಗಳೂರಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲವೆಂದು ಡಿಸಿಪಿ ಗಿರೀಶ್ ಹೇಳಿದ್ದು, ಅರ್ಜಿಯನ್ನು ಕೆಲ ಸ್ಪಷ್ಟನೆ ಕೇಳಿ ಹಿಂತಿರುಗಿಸಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದರೆ ಪರಿಶೀಲನೆ ಮಾಡಲಾಗುವುದು ಎಂದರು.

ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್‌, ಕಾನೂನು ಪ್ರಕಾರ ಡಿ. 25 ಗೊಳಗೆ ಅನುಮತಿ ನೀಡಿವ ಕುರಿತು ನಿರ್ಧಾರಕ್ಕೆ ಬರುವಂತೆ ಪೊಲೀಸರಿಗೆ ಸೂಚನೆ ನೀಡಿದೆ.

Comments are closed.