ಕರ್ನಾಟಕ

ಸಂದರ್ಭ ಬಂದರೆ ಧರ್ಮ ವಿರೋಧಿಯ ತಲೆ ಕಡಿಯಬೇಕು!

Pinterest LinkedIn Tumblr


ಯಾದಗಿರಿ:’ಸಂದರ್ಭ ಬಂದರೆ ಧರ್ಮ ವಿರೋಧಿಯ ತಲೆ ಕಡಿಯಲು ಸಿದ್ದವಾಗಿರಬೇಕು. ಪ್ರತಿಯೊಬ್ಬ ಹಿಂದು ಮನೆಯಲ್ಲಿ ಖಡ್ಗ, ಲಾಠಿ ಇಟ್ಟುಕೊಳ್ಳಬೇಕು’ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್‌ ಪ್ರಚೋದನ ಕಾರಿ ಭಾಷಣ ಮಾಡಿ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಯಾದಗಿರಿಯಲ್ಲಿ ಗುರುವಾರ ಸಂಜೆ ಶ್ರೀರಾಮಸೇನೆ ನಡೆಸಿದ ವಿರಾಟ್‌ ಹಿಂದೂ ಸಮಾವೇಶದಲ್ಲಿ ಉಗ್ರ ಭಾಷಣ ಮಾಡಿದ ರಾಜಾ ಸಿಂಗ್‌ ‘ಪ್ರತೀ ಹಿಂದುವೂ ಆತಂಕವಾದಿಗಳ ವಿರುದ್ಧ ಹೋರಾಟ ಮಾಡಲು ತಲವಾರು ಹಿಡಿಯಬೇಕು. ಅವರ ಒಬ್ಬ ಕಾರ್ಯಕರ್ತನೂ ಉಳಿಯಬಾರದು. ದೇಶಕ್ಕೆ, ಧರ್ಮಕ್ಕೆ ಗೌರವ ಕೊಡದವರಿಗೆ ಬಹಿಷ್ಕಾರ ಹಾಕಿ’ ಎಂದು ಕರೆ ನೀಡಿದರು.

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಸೇರಿದಂತೆ ಸಾವಿರಾರು ಶ್ರೀರಾಮ ಸೇನೆ ಕಾರ್ಯಕರ್ತರು ಸಮಾವೇಶದಲ್ಲಿ ಹಾಜರಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಕೈಯಲ್ಲಿ ತಲಾವಾರ್‌ ಪ್ರದರ್ಶಿಸಿರುವುದು ಕಂಡು ಬಂದಿದೆ.

ಈ ಸಂಬಂಧ ರಾಜಾ ಸಿಂಗ್‌ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು, ವಿಚಾರಣೆ ನಡೆಸುವುದಾಗಿ ಈ ಶಾನ್ಯ ವಲಯ ಐಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

ಸದಾ ಪ್ರಚೋದನಕಾರಿ ಭಾಷಣ ಮಾಡುವ ರಾಜಾ ಸಿಂಗ್‌ ವಿರುದ್ಧ 18 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಪದ್ಮಾವತಿ ಚಿತ್ರದ ವಿರುದ್ಧ ಕಿಡಿ ಕಾರಿದ್ದ ರಾಜಾ ಸಿಂಗ್‌ ಚಿತ್ರ ಬಿಡುಗಡೆಯಾದರೆ ದೇಶವೇ ಹೊತ್ತಿ ಉರಿಯಲಿದೆ ಎಂದು ಗುಡುಗಿದ್ದರು.

-ಉದಯವಾಣಿ

Comments are closed.