ಕರ್ನಾಟಕ

ಸಿದ್ದರಾಮಯ್ಯ ಮನೆಗೆ ಹೋದ ಮೇಲೆಯೇ ಅಚ್ಛೇ ದಿನ್‌ ಬರೋದು: ಬಿಎಸ್‌ವೈ

Pinterest LinkedIn Tumblr


ರಾಯಚೂರು: ನಾರಾಯಣಪುರ ಜಲಾಶಯದಿಂದ ನೀರು ಹರಿಸದೆ ರೈತರಿಗೆ ಅನ್ಯಾಯ ಮಾಡಲಾಗಿದೆ. ಕನಿಷ್ಠ 15 ದಿನ ನೀರನ್ನ ಕೊಟ್ಟು ರೈತರ ಬೆಳೆ ಉಳಿಸಬೇಕು. ಹೈದ್ರಾಬಾದ್ ಕರ್ನಾಟಕ ಕ್ಕೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ದೇವದುರ್ಗದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ಭಾಷಣ ಮಾಡಿದರು.

ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಿ ಸಿದ್ದರಾಮಯ್ಯರನ್ನ ಮನೆಗೆ ಕಳುಹಿಸದ ಮೇಲೆ ಅಚ್ಚೆ ದಿನ್ ಬರುತ್ತೆ. ಗುಜರಾತಿನ ಫಲಿತಾಂಶದಲ್ಲಿ ಗೊಂದಲ ಬೇಡ. ಕರ್ನಾಟಕದಲ್ಲೂ ನಾವೇ ಗೆಲ್ಲುತ್ತೇವೆ. ನನ್ನ ಸಂಕಲ್ಪ ರಾಜ್ಯವನ್ನು ಅಭಿವೃದ್ದಿ ಪಥದಲ್ಲಿ ತೆಗೆದುಕೊಂಡು ಹೋಗುವುದು ಎಂದು ಅವರು ಹೇಳಿದರು.

ಕೇಂದ್ರದಿಂದ ಒಂದು ಲಕ್ಷ ಕೋಟಿ ಹಣ ತಂದು ಕೃಷ್ಣ ಕೊಳ್ಳದ ಯೋಜನೆ ಮುಗಿಸುತ್ತೇವೆ. ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಆರಂಭಿಸಿದಲ್ಲ, ಕೇಂದ್ರ ಸರ್ಕಾರದ ಕಾಪಿ ಅದು. ದವಸ ಧಾನ್ಯ ಕೊಳೆತು ಹೋಗುತ್ತಿದೆ. ಇಂಥ ಅನ್ನಭಾಗ್ಯ ನೀಡಲಾಗುತ್ತಿದೆ ಎಂದು ಯಡಿಯೂರಪ್ಪ ಕಿಡಿಕಾರಿದರು.

ರಾಜ್ಯದಲ್ಲಿ ಸರ್ಕಾರ ಬದುಕಿದೆಯೇ. ಪರೇಶ್‌ ಹತ್ಯೆ ಸೇರಿ, ಇದುವರೆಗೆ 20 ಹಿಂದೂ ಯುವಕರ ಕೊಲೆಯಾಗಿದೆ. ಸಿಎಂ ಹೇಳಬೇಕು ಕೊಲೆ ಸುಲಿಗೆ ನಿರಂತರವಾಗಿ ಯಾಕೆ ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಬಿಎಸ್‌ವೈ ವಾಗ್ದಾಳಿ ನಡೆಸಿದರು.

Comments are closed.