
ಶಿವಮೊಗ್ಗ: ಸ್ವಾಮೀಜಿ ಜೊತೆ ರಾಸಲೀಲೆ ಪ್ರಕರಣದಿಂದ ಸುದ್ದಿಯಾಗಿದ್ದ ನಟಿ ಕಾವ್ಯಾ ಆಚಾರ್ಯ ಸಹೋದರ ಕೃಷ್ಣ ಆಚಾರ್ಯ ಮೇಲೆ ಕೊಲೆ ಯತ್ನ ಹಾಗೂ ಅಮ್ಮ ನಾಗರತ್ನ ಅವರಿಗೆ ಅಪರಿಚಿತರು ಜೀವ ಬೆದರಿಕೆ ಹಾಕಿರೋ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಇವರಿಬ್ಬರೂ ಗುರುವಾರ ರಾತ್ರಿ ಮಂಗಳೂರಿನಿಂದ ತೀರ್ಥಹಳ್ಳಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ತೀರ್ಥಹಳ್ಳಿ ಸಮೀಪ ಶಿವರಾಜಪುರದ ಬಳಿ ಓಮ್ನಿಯಲ್ಲಿ ಬಂದಿದ್ದ ಐದು ಜನ ಅಪರಿಚಿತ ವ್ಯಕ್ತಿಗಳು ಇವರ ಕಾರು ಅಡ್ಡ ಹಾಕಿ ಕಾವ್ಯಾ ಆಚಾರ್ಯ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
ಬಳಿಕ ಈ ಕುರಿತು ಕೇಸು, ಕಂಪ್ಲೇಂಟ್ ಎಂದು ಹೋದಲ್ಲಿ ಇಡೀ ಕುಟುಂಬದ ಎಲ್ಲರನ್ನೂ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಕೃಷ್ಣ ಅವರಿಗೆ ಚೂರಿಯಿಂದ ಇರಿದು ಕೊಲೆಗೆ ಕೂಡ ಯತ್ನಿಸಿದ್ದಾರೆ. ಈ ವೇಳೆ ಕೃಷ್ಣ ಅವರ ತಾಯಿ ಕೂಗಿಕೊಂಡಿದ್ದರಿಂದ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಗಾಯಾಳು ಕೃಷ್ಣ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Comments are closed.