ಕರಾವಳಿ

ಸಣ್ಣ ಮಕ್ಕಳು ಪದೇ ಪದೇ ಆಳುತ್ತಾರೆ .. ಯಾಕೆ ಗೊತ್ತೇ….?

Pinterest LinkedIn Tumblr

ನಿಮ್ಮ ಮುದ್ದು ಕಂದಮ್ಮಗಳ ತ್ವಚೆ ಎಷ್ಟು ಸೂಕ್ಷ್ಮವಾಗಿರುತ್ತದೆಯೋ, ಅದರ ಎರಡರಷ್ಟು ಸೂಕ್ಶ್ಮ ನಿಮ್ಮ ಮಗುವಿನ ಮುದ್ದು ಮನಸ್ಸು. ಪ್ರತಿನಿತ್ಯ ಹೊಸ ಹೊಸ ವಸ್ತುಗಳ್ಳನ್ನು ನೋಡುವುದು, ಸ್ಪರ್ಶಿಸುವುದು, ಗ್ರಹಿಸುವ ಚಟುವಟಿಕೆಯಲ್ಲಿ ಕಳೆದು ಹೋಗಿರುತ್ತವೆ.

ಜೀವನದ ಅನುಭವವನ್ನು ಒಂದೊಂದಾಗಿ ಕೂಡಿಡುತ್ತಾ, ತಾಯಿಯ ಮೇಲೆ ಸಂಪೂರ್ಣವಾಗಿ ಅವಲಂಭಿತಗೊಂಡಿರುತ್ತವೆ. ಮಕ್ಕಳು ತಾಯಿಯನ್ನು ಎಷ್ಟು ಹಚ್ಚಿಕೊಂಡಿರುತ್ತಾರೆ ಎಂದರೆ ತಾಯಿ ಒಂದು ನಿಮಿಷ ಅತ್ತ ಇತ್ತ ಹೋದರು ಅಳಲಾರಂಭಿಸುತ್ತದೆ. ಇದನ್ನು ಅಗಲಿಕೆಯ ಕಳವಳ(separation anxiety) ಎಂದು ವೈದ್ಯರು ಕರಿಯುತ್ತಾರೆ. ಹೌದು! ಪುಟ್ಟ ಕಂದಮ್ಮಗಳ, ಮನಸ್ಸಿನ್ನಲ್ಲಿಯು ಸಹ ಒತ್ತಡವಿರುತ್ತದೆ. ತಾಯಿ ಎಲ್ಲಿ ತನ್ನನ್ನು ಬಿಟ್ಟು ಹೋಗುತಾಳೇ ಎಂಬ ಅಭದ್ರತೆಯಿಂದಾಗಿ ಮಕ್ಕಳು ಅಳುತ್ತಾರೆ. ಹಾಗಾಗಿ ಈ ಅಗಲಿಕೆಯ ಕಳವಳಕ್ಕೆ ಕಾರಣಗಳೇನು, ಎಂದು ತಿಳಿಯೋಣ ಬನ್ನಿ.

೧. ನಿದ್ರೆಯಲ್ಲಿ ಅಡಚಣೆ
ಮಕ್ಕಳನ್ನು ರಾತ್ರಿ ನಿದ್ರೆಗೆ ಜಾರಿಸಿ, ನೀವು ಅಡಚಣೆ ಇಲ್ಲದೆ ಮಲಗಿದ್ದಾಗ, ಒಮ್ಮೆಲೇ ಎದ್ದು ಅಳರಂಭಿಸುವುದನ್ನು ಗಮನಿಸಿದ್ದೀರಾ? ಇದಕ್ಕೆ ಪ್ರಮುಖ ಕಾರಣವೇನೆಂದರೆ ಅಗಲಿಕೆಯ ಕಳವಳ ಎಂದು ಮಕ್ಕಳ ತಜ್ಞರು ಹೇಳುತ್ತಾರೆ.

ಮಕ್ಕಳಿಗೆ ನಿದ್ರೆಯಲ್ಲಿ ಎಚ್ಚರವಾದಾಗ, ತಾಯಿ ತನ್ನ ಪಕ್ಕದಲ್ಲಿ ಇಲ್ಲದಿರುವುದ್ದನ್ನು ಗಮನಿಸಿ, ಭಯಗೊಂಡು ಗಾಬರಿಯಿಂದ ಅಳಲಾರಂಭಿಸುತ್ತವೆ. ಇದಕ್ಕೆ ಉತ್ತಮ ಪರಿಹಾರವೇನೆಂದರೆ ಮಗುವನ್ನು ನಿಮ್ಮ ಹತ್ತಿರದಲ್ಲಿಯೇ ಮಲಗಿಸಿಕೊಳ್ಳಿ. ಕ್ರಮೇಣವಾಗಿ, ಒಂದು ವಾರದಲ್ಲಿ 2 ದಿನ ಪ್ರತ್ಯೇಕ ಕೋಣೆಯಲ್ಲಿ ಮಲಗಿಸಿ. ಹೀಗೆ ನಿಧಾನವಾಗಿ ಮಗುವನ್ನು ಪ್ರತ್ಯೇಕವಾಗಿ ಮಲಗಿಸುವುದ್ದನ್ನು ಅಭ್ಯಸಿಸಿ.

೨. ಪರಿಚಯವಿಲ್ಲದವರನ್ನು ಕಂಡರೆ ಭಯ
ಇದು ಎಲ್ಲಾ ಮಕ್ಕಳ್ಳಲ್ಲಿ ಕಂಡುಬರುವ ಸಹಜ ವರ್ತನೆ. ಮುಖ ಪರಿಚಯವಿಲ್ಲದ ಯಾವುದೇ ವ್ಯಕ್ತಿಯನ್ನು ಕಂಡ ಕೂಡಲೇ ಮಕ್ಕಳು ಅಳಲಾರಂಭಿಸುತ್ತವೆ. ಯಾಕೆ ಹೀಗೆ ಹೊಸ ವ್ಯಕ್ತಿಗಳ್ಳನ್ನು ಕಂಡರೆ ಗಾಬರಿಗೊಳ್ಳುತ್ತದೆ ಎಂದು ನೀವು ಯೋಚಿಸುತ್ತಿದ್ದೀರಾ? ಕಾರಣ ಇಷ್ಟೇ, ಎಲ್ಲಿ ತನ್ನನ್ನು, ತನ್ನ ತಾಯಿಯಿಂದ ದೂರಮಾಡಿಬಿಡುತ್ತಾರೋ, ಎಂಬ ಭಯದಿಂದ ಅಷ್ಟೇ. ಪ್ರತಿನಿತ್ಯ ಹೊಸ ವ್ಯಕ್ತಿಯ ಪರಿಚಯವಾಗುತ್ತಿದ್ದರೆ, ಕ್ರಮೇಣವಾಗಿ, ಆ ವ್ಯಕ್ತಿಯೊಂದಿಗೆ ಹೊಂದಿಕೊಳ್ಳುತ್ತಾರೆ.

೩. ತಾಯಿಯಿಲ್ಲದೆ ಮಲಗುವುದಿಲ್ಲ
ಇದೂ ಕೂಡ, ಅಗಲಿಕೆಯ ಕಳವಳಕ್ಕೆ ಪ್ರಮುಖ ಕಾರಣವಾಗಿದೆ. ಮೇಲೆ ಹೇಳಿದ ಹಾಗೆ ಅಭದ್ರತೆಯ ಕಾರಣಗಳಿಂದ, ಮಗು ತಾಯಿಯಿಲ್ಲದೆ ನಿದ್ರೆಗೆ ಜಾರುವುದಿಲ್ಲ. ತಾಯಿ ಪಕ್ಕದಲ್ಲಿ ಇದ್ದಾಳೆ, ಎಂದು 10 ಬಾರಿ ಖಚಿತಗೊಳಿಸಿಕೊಂಡ ನಂತರವಷ್ಟೇ ಮಕ್ಕಳು ನಿದ್ರಿಸುತ್ತಾರೆ. ಮಕ್ಕಳ್ಳನ್ನು ಮಲಗಿಸುವಾಗ ನೀವು ಗಮನಿಸಿರಬಹುದು, ಕನಿಷ್ಠ 5 – 6 ಬಾರಿ ನಿಮ್ಮ ಮುಖ ನೋಡಿದ ಮೇಲೆ ಮಲಗುತ್ತಾರೆ.

೪. ನೀವು ಮಕ್ಕಳೊಂದಿಗೆ ಆಟವಾಡದ್ದಿದ್ದಾಗ
ಇದ್ದಕ್ಕಿದಂತೆಯೇ ನಿಮ್ಮ ಮಕ್ಕಳು ಆಟ ಆಡುವುದನ್ನು ನಿಲ್ಲಿಸಿದ್ದಾರೆಯೇ?. ಚಿಂತಿಸದಿರಿ. ಹಲವು ಬಾರಿ ನಿಮ್ಮ ಮಗು ನಿಮ್ಮೊಂದಿಗೆ ಆಟವಾಡಬೇಕೆಂದು ನಿರೀಕ್ಷಿಸಿರುತ್ತದೆ. ಅದನ್ನು ಹೇಗೆ ವ್ಯಕ್ತ ಪಡಿಸಬೇಕೆಂದು ತಿಳಿಯದೆ ಮಂಕಾಗಿ ಒಂದೆಡೆ ಕುಳಿತು ಕೊಂಡಿರುತ್ತದೆಯಷ್ಟೇ. ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಮಗುವಿಗೆ ಹೊಸ ಸ್ನೇಹಿತರನ್ನು ಪರಿಚಯ ಮಾಡಿ ಕೊಡಿ. ಆಗ ಮಕ್ಕಳು ನಿಮ್ಮನ್ನು ಆಟವಾಡಲು ನಿರೀಕ್ಷಿಸದೆ, ತಮ್ಮ ಪಾಡಿಗೆ ತಾವು ಆಟವಾಡುತ್ತಾರೆ.

೫. ಒಂಟಿಯಾಗಿ ಬಿಟ್ಟಾಗ
ಒಂದು ಲೋಟ ನೀರು ಕುಡಿಯಲು ಅತ್ತ ಇತ್ತ ಹೋದರು, ನಿಮ್ಮ ಮಗು ಅಳುತ್ತಿದೆಯೇ? ಇದು ಕೂಡ ಅಗಲಿಕೆಯ ಕಳವಳದ ಲಕ್ಷಣವಾಗಿದೆ. ಮಕ್ಕಳ್ಳನ್ನು ಇದರಿಂದ ಹೊರಗೆ ತರಲು, ನೀವು ಅದರ ಗಮನವನ್ನು ಬೇರೆಡೆಗೆ ಸೆಳೆಯಬೇಕು.

ತನ್ನ ಪಾಡಿಗೆ ತಾನು ಆಟವಾಡಲು ಬಿಡುವುದು, ಬೇರೆ ಮಕ್ಕಳೊಂದಿಗೆ ಸೇರಲು ಅವಕಾಶ ಮಾಡಿಕೊಡುವುದು ಹೀಗೆ ಮುಂತಾದ ಅಭ್ಯಾಸಗಳ್ಳನ್ನು ರೂಢಿ ಮಾಡಿಸುವುದರಿಂದ, ಮಕ್ಕಳ್ಳನ್ನು ಅಭದ್ರೆತೆಯ ಮನೋಭಾವದಿಂದ ದೂರ ಮಾಡಬಹುದು.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Comments are closed.