ಕರಾವಳಿ

‘ಸೂರಜ್ ಕಲಾಸಿರಿ ಸಮ್ಮೇಳನದ ಸರ್ವಾಧ್ಯಕ್ಷ ಎ.ಈಶ್ವರಯ್ಯ ಹಾಗೂ ಪೇಜಾವರ ಶ್ರೀಗಳಿಗೆ ಆಹ್ವಾನ

Pinterest LinkedIn Tumblr

ಮಂಗಳೂರು: ಮುಡಿಪು ಸೂರಜ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಇದೇ ದಶಂಬರ 21 ರಿಂದ 23 ರ ವರೆಗೆ ಜರಗುವ ಮೂರು ದಿನಗಳ. ಸಮೃದ್ಧ ಭಾರತ ಸಂಸ್ಕೃತಿ ದರ್ಶನ ‘ಸೂರಜ್ ಕಲಾಸಿರಿ – 2017’ ರಾಷ್ಟ್ರ ಮಟ್ಟದ ಕಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿರುವ ಹಿರಿಯ ಕಲಾವಿಮರ್ಶಕ ಎ.ಈಶ್ವರಯ್ಯ ಅವರಿಗೆ ವಿಧ್ಯುಕ್ತವಾದ ಆಹ್ವಾನ ನೀಡಲಾಗಿದೆ.

ಉಡುಪಿ – ಮಣಿಪಾಲ ರಸ್ತೆಯ ಲಕ್ಷ್ಮೀಂದ್ರ ನಗರದಲ್ಲಿರುವ ಈಶ್ವರಯ್ಯ ಅವರ ನಿವಾಸ ‘ಇಂದ್ರಾಣಿ’ ಗೆ ಭೇಟಿಯಿತ್ತ ಸಂಘಟಕರು ಅವರಿಗೆ ಶಾಲು ಫಲತಾಂಬೂಲ ನೀಡಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಯ್ಯ ‘ವಿದ್ಯಾಸಂಸ್ಥೆಯೊಂದರ ಆಶ್ರಯದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಿಂತನೆಯೊಂದಿಗೆ ಕಲಾಮೇಳವನ್ನು ನಡೆಸುತ್ತಿರುವುದು ಸ್ತುತ್ಯ.ಗ್ರಾಮೀಣ ಪರಿಸರದಲ್ಲಿ ದೇಶದ ವಿವಿಧ ಭಾಗಗಳ ಕಲಾತಂಡಗಳನ್ನು ಕಲೆಹಾಕಿ ವಿಚಾರ ಮಂಥನದೊಂದಿಗೆ ಪ್ರದರ್ಶನಗಳನ್ನು ಏರ್ಪಡಿಸು ತ್ತರುವುದರಿಂದ ಸಾಂಸ್ಕೃತಿಕ ಭಾವೈಕ್ಯ ಸಾಧಿಸಿದಂತಾಗುತ್ತದೆ’ ಎಂದು ಆಯೋಜಕರನ್ನು ಅಭಿನಂದಿಸಿದರು.

ಸೂರಜ್ ಎಜ್ಯುಕೇಶನಲ್ ಆ್ಯಂಡ್ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಮಂಜುನಾಥ ಎಸ್.ರೇವಣ್ಕರ್ ಈಶ್ವರಯ್ಯರಿಗೆ ಆಹ್ವಾನ ಪತ್ರಿಕೆ ನೀಡಿದರು. ಕಲಾಸಿರಿಯ ಸಂಘಟನಾ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮಗಳ ವಿವರ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ ಹೆಗಡೆ ಸೋಂದಾ ಮತ್ತು ಕಾರ್ಯದರ್ಶಿ ಕೇಶವ ಹೆಗಡೆ ಉಪಸ್ಥಿತರಿದ್ದರು.

ಪೇಜಾವರ ಶ್ರೀಗಳಿಗೆ ಆಮಂತ್ರಣ :

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿಯಿತ್ತ ಕಲಾಸಿರಿ ಸಮಿತಿ ಪರ್ಯಾಯ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳ ವರಿಗೆ ಆಮಂತ್ರಣವಿತ್ತು ಆಶೀರ್ವಾದ ಪಡೆದರು. ಪೇಜಾವರ ಶ್ರೀಗಳು ಕಾರ್ಯಕ್ರಮಕ್ಕೆ ಶುಭಕೋರಿದರು.ಸಮಿತಿ ಅಧ್ಯಕ್ಷ ಡಾ.ಮಂಜುನಾಥ ಎಸ್.ರೇವಣ್ಕರ್, ಪದಾಧಿಕಾರಿಗಳಾದ ಭಾಸ್ಕರ ರೈ ಕುಕ್ಕುವಳ್ಳಿ, ಕೇಶವ ಹೆಗಡೆ ಮತ್ತು ಸೋಂದಾ ಲಕ್ಷ್ಮೀಶ ಹೆಗಡೆಯವರಿಗೆ ಮಂತ್ರಾಕ್ಷತೆ ನೀಡಿ ಹರಸಿದರು.

Comments are closed.