ಕರ್ನಾಟಕ

ನಕ್ಸಲರ ಜತೆ ನಡೆದ ಗುಂಡಿನ ಕಾಳಗ; ಧಾರವಾಡದ ಮಂಜುನಾಥ ಜಕ್ಕಣ್ಣ ಹುತಾತ್ಮ

Pinterest LinkedIn Tumblr

ಧಾರವಾಡ: ಮಹಾರಾಷ್ಟ್ರ- ಛತ್ತೀಸ್‌ಗಡ್‌ ಗಡಿಯಲ್ಲಿನ ಗಡ್‌ಚಿರೋಲಿಯಲ್ಲಿ ಧನೋರಾ ಬಳಿ ಸಿಆರ್‌ಪಿಎಫ್‌ ಯೋಧರು ಮತ್ತು ನಕ್ಸಲರ ನಡುವೆ ಕಳೆದ ರಾತ್ರಿ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಗುಂಡು ತಗುಲಿ ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದ ಸಿಆರ್‌ಪಿಎಫ್ ಯೋಧ ಮಂಜುನಾಥ ಜಕ್ಕಣ್ಣವರ(30) ಅವರು ಹುತಾತ್ಮರಾಗಿದ್ದಾರೆ.

ಮಂಜುನಾಥ್ ಮೂಲತಃ ಮನಗುಂಡಿ ಗ್ರಾಮದವರಾಗಿದ್ದು, ಸಿಆರ್‌ಪಿಎಫ್ ಯೋಧರಾಗಿ ನಾಗ್ಪುರದಲ್ಲಿ ಕೆಲಸ ಮಾಡುತ್ತಿದ್ದರು. ಯೋಧನ ಸಾವಿನಿಂದಾಗಿ ಅವರ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಪಾರ್ಥಿವ ಶರೀರ ಇನ್ನು ಗ್ರಾಮಕ್ಕೆ ಬಂದಿಲ್ಲ.

ಕಾರ್ಯಾಚರಣೆ ವೇಳೆ ಇನ್ನಿಬ್ಬರು ಯೋಧರಿಗೆ ಗಾಯಗಳಾಗಿವೆ. ದಾಳಿ ಪ್ರದೇಶದಲ್ಲಿ ನಕ್ಸಲರ ಶೋಧಕ್ಕಾಗಿ ಪೊಲೀಸರು ಮತ್ತು ಸಿಆರ್‌ಪಿಎಫ್‌ ಯೋಧರು ಜಂಟಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

Comments are closed.