ಕರ್ನಾಟಕ

ಬೆಂಗಳೂರಿನಲ್ಲಿ ಸೊಂಟ ಮುಟ್ಟಿ ಪರಾರಿಯಾಗುತ್ತಿದ್ದ ಕಾಮುಕನನ್ನು ಬೆನ್ನಟ್ಟಿ ಹಿಡಿದ ಮಹಿಳೆ

Pinterest LinkedIn Tumblr

ಬೆಂಗಳೂರು: ತನ್ನ ಗೆಳೆಯನಿಗಾಗಿ ರಸ್ತೆಯಲ್ಲಿ ಬದಿಯಲ್ಲಿ ಕಾಯುತ್ತಾ ನಿಂತಿದ್ದ ಯುವತಿಯೊಬ್ಬಳ ಸೊಂಟ ಮುಟ್ಟಿ ಪರಾರಿಯಾಗುತ್ತಿದ್ದ ಕಾಮುಕರನ್ನು ಯುವತಿಯೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸುವ ಘಟನೆ ಹೆಚ್ಎಸ್ಆರ್ ಲೇ ಔಟ್ ನಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಖಾಸಗಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಮನಗೆ ತೆರಳುವ ಸಲುವಾಗಿ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಗೆಳಯನಿಗಾಗಿ ಕಾಯುತ್ತಾ ರಸ್ತೆಯಲ್ಲಿ ನಿಂತಿದ್ದಾರೆ. ಯುವತಿಯ ಗೆಳೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ವಾಹನವನ್ನು ತೆಗೆದುಕೊಂಡು ಬರಲು ಹೋಗಿದ್ದ.

ಯುವತಿ ರಸ್ತೆಯಲ್ಲಿ ನಿಂತಿರುವುದನ್ನು ನೋಡುತ್ತಿದ್ದ ಕಾಮುಕರು ಬೈಕ್ ನಲ್ಲಿ ಬಂದು ಯುವತಿಯ ಹಿಂಬದಿಯಿಂದ ಆಕಯ ಸೊಟ್ಟವನ್ನು ಮುಟ್ಟಿ ಪರಾರಿಯಾಗಲು ನೋಡಿದ್ದಾರೆ. ಕೂಡಲೇ ಗೆಳೆಯನ ಬೈಕ್ ಹತ್ತಿದ ಮಹಿಳೆ ಕಾಮುಕರ ಬೆನ್ನಟ್ಟಿದ್ದಾರೆ. ಬೈಕ್ ನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಒಬ್ಬ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ರಸ್ತೆಯಲ್ಲಿ ನನ್ನ ಗೆಳೆಯನಿಗಾಗಿ ಕಾಯುತ್ತಾ ನಿಂತುಕೊಂಡಿದ್ದೆ. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಹಿಂಬದಿಯಿಂದ ಕೆಟ್ಟದಾಗಿ ಮುಟ್ಟಿದರು. ನಡುರಸ್ತೆಯಲ್ಲಿ ಬಹಿರಂಗವಾಗಿ ಮಹಿಳೆಯೊಬ್ಬರನ್ನು ಕೆಟ್ಟದಾಗಿ ಮುಟ್ಟಿದ್ದನ್ನು ನೋಡಿ ನನಗೆ ಬಹಳ ಆಘಾತವಯಿತು. ಆರೋಪಿಗಳನ್ನು ಸುಮ್ಮನೆ ಬಿಡಬಾರದು ಎಂದು ಆವರ ಬೆನ್ನಟ್ಟಿದೆ. ಕಿಲೋಮೀಟರ್ ಗಟ್ಟಲೆ 10 ನಿಮಿಷಗಳ ಬೆನ್ನಟ್ಟಿದ್ದೆ. ರಸ್ತೆಯಲ್ಲಿ ಹೋಗುವಾಗಲೇ 100 ಸಹಾಯವಾಣಿಗೆ ಕರೆ ಮಾಡಿದ್ದೆ. ಬೈಕ್ ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಆರೋಪಿಯನ್ನು ಹಿಡಿದಿದ್ದೆ. ಆದರೆ, ಬೈಕ್ ಸವಾರನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಸವಾರ ತಪ್ಪಿಸಿಕೊಂಡಿದ್ದ ಎಂದು ಯುವತಿ ಹೇಳಿಕೊಂಡಿದ್ದಾರೆ.

ಆರೋಪಿಯನ್ನು ಹಿಡಿದ ಬಳಿಕವೂ ಆತ ತಪ್ಪಿಸಿಕೊಳ್ಳಲು ಯತ್ನ ನಡೆಸಿದ್ದ, ಬಳಿಕ ನನ್ನ ಗೆಳೆಯ ಹಾಗೂ ಸಾರ್ವಜನಿಕರ ಸಹಾಯದೊಂದಿದೆ ಆತನನ್ನು ಹಿಡಿಯಲಾಯಿತು. ರಾತ್ರಿಯಾದ್ದರಿಂದ ಇಬ್ಬರು ಪೊಲೀಸ್ ಅಧಿಕಾರಿಗಳು ಮಾತ್ರ ಕರ್ತವ್ಯದಲ್ಲಿದ್ದರು. ಇಬ್ಬರೂ ಅಧಿಕಾರಿಗಳು ಸಹಾಯಕ್ಕೆ ಧಾವಿಸಿ ಹೆಚ್ಎಸ್ಆರ್ ಲೇ ಔಟ್ ಪೊಲೀಸರಿಗೆ ಮಾಹಿತಿ ನೀಡಿದರು.

ಈ ವೇಳೆ ಆರೋಪಿ ನಾರಾಯಣಸ್ವಾನಿ ಓಡಿ ಹೋಗಲು ಯತ್ನ ನಡೆಸಿದ್ದ. ಬಳಿಕ ಆತನೇ ಬಿದ್ದು ಗಾಯಗೊಂಡ. ಇಷ್ಟರಲ್ಲೇ ಸ್ಥಳಕ್ಕೆ ಆಗಮಿಸಿದ ಹೆಚ್ಎಸ್ಆರ್ ಲೇಐಟ್ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದರು ಎಂದು ತಿಳಿಸಿದ್ದಾರೆ.

ಕಳೆದ 2 ವರ್ಷಗಳಿಂದ ನಾನು ಬೆಂಗಳೂರಿನಲ್ಲಿಯೇ ನೆಲೆಯೂರಿದ್ದು. ಈ ರೀತಿಯ ಘಟನೆಗಳು ಎಂದಿಗೂ ಕೇಳಿರಲಿಲ್ಲ. ದೂರು ನೀಡಲು ನಾನು ಹಿಂಜರಿದಿದ್ದೆ. ಆದರೆ, ಪೊಲೀಸರು ರಕ್ಷಣೆ ನೀಡುವ ಭರವಸೆ ನೀಡಿ ದೂರು ದಾಖಲಿಸುವಂತೆ ತಿಳಿಸಿದರು.

ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೀಗ ಮತ್ತೊಬ್ಬ ಆರೋಪಿ ಬೈಕ್ ಸವಾರ ಮನೋಜ್ ನನ್ನೂ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

Comments are closed.