ಕರ್ನಾಟಕ

ಗೌರಿ ಲಂಕೇಶ್‌ ಪತ್ರಿಕೆ ಆರಂಭಕ್ಕೆ ಕುಟುಂಬದಲ್ಲೇ ಭಿನ್ನಾಭಿಪ್ರಾಯ

Pinterest LinkedIn Tumblr

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಈಗ ಮೂರು ತಿಂಗಳು ಆಗಿದೆ. ಗೌರಿ ಲಂಕೇಶ್‌ ನಡೆಸುತ್ತಿರುವ ಲಂಕೇಶ್‌ ಪತ್ರಿಕೆ ಕೂಡ ಮುದ್ರಣ ಕಂಡಿಲ್ಲ.

ಗೌರಿ ಲಂಕೇಶ್‌ ಪತ್ರಿಕೆಯನ್ನು ಮುಂದುವರಿಸುವ ಕುರಿತಂತೆ ಕುಟುಂಬ ಸದಸ್ಯರಲ್ಲೇ ಭಿನ್ನಾಭಿಪ್ರಾಯವಿದೆ.

ಪತ್ರಿಕೆಯನ್ನು ಯಾರೂ ಮುನ್ನಡೆಸಬಾರದು ಎಂದು ಗೌರಿ ಲಂಕೇಶ್‌ ತಾಯಿ ಇಂದಿರಾ ಈಗಾಗಲೇ ನ್ಯಾಯಾಲಯದ ಆದೇಶ ತಂದಿದ್ದಾರೆ. ಲಂಕೇಶ್‌ ಅಥವಾ ಗೌರಿ ಹೆಸರಿನಲ್ಲಿ ಯಾರೂ ಪತ್ರಿಕೆ ನಡೆಸಬಾರದು ಎಂದು ಇಂಜಕ್ಷನ್‌ ತಂದಿದ್ದಾರೆ.

ಈ ಪತ್ರಿಕೆಯನ್ನು ಗೌರಿ ಮಾತ್ರ ಹೊರತರಲು ಸಾಧ್ಯವಾಗಿದ್ದು, ಯಾರೂ ಮುನ್ನಡೆಸಬಾರದು ಎಂಬುದು ತಾಯಿಯ ಅಭಿಪ್ರಾಯವಾಗಿದೆ.

ಆದರೆ ಗೌರಿ ಸಹೋದರಿ ಕವಿತಾ ಲಂಕೇಶ್‌ ಪತ್ರಿಕೆಯ ಸಿಬ್ಬಂದಿಯ ಪರವಾಗಿದ್ದಾರೆ. ಈ ಪತ್ರಿಕೆಯನ್ನು ಮತ್ತೆ ಆರಂಭಿಸಬೇಕು ಎಂದು ಕವಿತಾ ವಾದ.

ನಾನು ಗೌರಿ ಎಂಬ ಹೆಸರಿನಲ್ಲೇ ಪತ್ರಿಕೆ ಹೊರತರಲು ಅಲ್ಲಿನ ಕೆಲ ಸಿಬ್ಬಂದಿ ಈಗಾಗಲೇ ತಯಾರಿ ನಡೆಸಿದ್ದಾರೆ. ಇದಕ್ಕೆ ಕವಿತಾ ಬೆಂಬಲ ಕೂಡ ಇದೆ ಎನ್ನಲಾಗಿದೆ.

ಗೌರಿ ಲಂಕೇಶ್‌ ಸಹೋದರ ಇಂದ್ರಜಿತ್‌ ಈ ಕುರಿತು ಯಾವುದೇ ಪತ್ರಿಕ್ರಿಯೆ ನೀಡಿಲ್ಲ. ಈ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಇಂದ್ರಜಿತ್‌ ಲಂಕೇಶ್‌ ತಿಳಿಸಿದ್ದಾರೆ.

Comments are closed.